ಹಾರೂಗೇರಿ ಪಟ್ಟಣದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ
ವಿಶ್ವಕರ್ಮರು. (RNI) ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಕಾಳಿಕಾದೇವಿ ದೇವಸ್ಥಾನ ಸಮಿತಿ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ 8ನೇ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು
ವಿಶ್ವಕರ್ಮರು ರೈತರಿಗೆ ಬೇಕಾಗುವ ನೇಗಿಲು, ರೆಂಟಿ, ಕುಂಟಿ, ಬಂಗಾರದ ಆಭರಣಗಳು ಮತ್ತು ದೇವಸ್ಥಾನಗಳ ವಾಸ್ತು ಶಿಲ್ಪ ಕಲೆಗಳನ್ನು ತಯಾರಿಸುವ ವಿಶ್ವಕರ್ಮರು ಜಗತ್ತಿನ ನಿರ್ಮಾತೃರು ಎಂದು ಇಂಚಗೇರಿ ಮಹಾಸಂಸ್ಥಾನ ಹಾಗೂ ಗೌರವಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಹಸಿರು ಸೇನೆಯ ಪೂಜ್ಯ ಶಶಿಕಾಂತ ಪಡಸಲಗಿ ಆಶೀರ್ವಚನ ನೀಡಿದರು.
ಇನ್ನೊರ್ವ ಸಾನಿಧ್ಯವನ್ನು ಪ. ಪೂ ಮಳೆಯರಾಜೇಂದ್ರ ಸ್ವಾಮಿಗಳು, ಮಹಾಪುರುಷರು ಸುಕ್ಷೇತ್ರ ನಂದಿಕೇಶ್ವರ ನಗರ, ಮುರನಾಳ ವಹಿಸಿ ಮಾತನಾಡಿ ಜಗತ್ತಿನಲ್ಲಿರುವ ಕರಕುಶಲ ಕರ್ಮಿಗಳೆಲ್ಲ ಸಮುದಾಯಗಳ ಸಮೂಹವೇ ವಿಶ್ವಕರ್ಮ ಸಮೂಹ ಆದ್ದರಿಂದ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರು ಅನೇಕ ಸಾವಳತ್ತಗಳನ್ನು ನೀಡಿ ಸಣ್ಣ ಸಮುದಾಯವನ್ನು ಮೇಲೇತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆಶೀರ್ವಾಚನ ನೀಡಿದರು.
ಮುಖ್ಯ ಅತಿಥಿಗಳಾಗಿ ವಿಶ್ರಾಂತ ಉಪನ್ಯಾಸಕ ಎಸ್.ಕೆ.ಪತ್ತಾರ ಆಗಮಿಸಿ ಜಯಂತಿಯ ಕುರಿತು ಮಾತನಾಡಿದರು. ಇದೇ ಸಮಯದಲ್ಲಿ ಕುಮಾರಿ ರಾಧಿಕಾ ಪತ್ತಾರ ಹಾಗೂ ಸಂಗಡಿಗರಿಂದ ಭಾರತನಾಟ್ಯ ಮತ್ತು ಓಂಕಾರ ಮೆಲೋಡಿಸ್ ರವರಿಂದ ರಸಮಂಜರಿ ಕಾರ್ಯಕ್ರಮ ನೆರೆದ ಎಲ್ಲರನ್ನೂ ರಂಜಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರು ಕುಂಭಮೇಳ, ಮಂಗಳ ವಾದ್ಯಮೇಳಗಳೊಂದಿಗೆ ವಿಶ್ವಕರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.
ಇದೇ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ತುಕಾರಾಮ ಬಡಿಗೇರ, ಪಶು ವೈದ್ಯಾಧಿಕಾರಿ ಮನೋಹರ ಪತ್ತಾರ, ಕಾಶಪ್ಪ ಜಂಬಗಿ, ಬರಮು ಚಿಮ್ಮಡ, ರಾಮು ಬಡಿಗೇರ, ಶ್ಯಾಮರಾವ ಬಡಿಗೇರ, ಎಂ.ಎಂ.ಪತ್ತಾರ, ಮೊನೇಶ ಪತ್ತಾರ, ವಿಕ್ರಮ ಪತ್ತಾರ, ಮೊನೇಶ ಕಂಬಾರ, ಹಣಮಂತ ಬಡಿಗೇರ, ಗಜಾನನ ಬಡಿಗೇರ, ವೆಂಕಟೇಶ ಪತ್ತಾರ, ಶಿವಾನಂದ ಬಡಿಗೇರ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಕಲ್ಲಪ್ಪ ಬಡಿಗೇರ ಮಾತನಾಡಿದರು, ಈಶ್ವರ ಬಡಿಗೇರ ಸ್ವಾಗತಿಸಿದರು, ವೀರಭದ್ರ ಬಡಿಗೇರ ನಿರೂಪಿಸಿದರು, ಶಂಕರ ಕಡಲಾಸ್ಕರ ವಂದಿಸಿದರು.
What's Your Reaction?






