ಹಾರೂಗೇರಿ ಪಟ್ಟಣದ ಭಾರತ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಸನ್ 2022 23ನೇ ಸಾಲಿನ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ
ದುರ್ಬಲರಾದ. (RNI) ಆರ್ಥಿಕವಾಗಿ ದುರ್ಬಲರಾದ ವ್ಯಕ್ತಿಗಳನ್ನು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನಮ್ಮ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ ಆದ್ದರಿಂದ ನಮ್ಮ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ವ್ಯವಹರಿಸುವ ಮೂಲಕ ತಮ್ಮ ಮತ್ತು ಸಂಘದ ಅಭಿವೃದ್ಧಿಗಾಗಿ ಸಹಕರಿಸಬೇಕೆಂದು ಸಂಸ್ಥಾಪಕ ಅಧ್ಯಕ್ಷ ಈರನಗೌಡ ಪಾಟೀಲ ಹೇಳಿದರು.
ಪಟ್ಟಣದ ಎಂ.ಬಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಪ್ರತಿಷ್ಠಿತ ಬ್ಯಾಂಕಗಳಲ್ಲಿ ಒಂದಾದ ಭಾರತ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಸನ್ 2022-23ನೇ ಸಾಲಿನ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಈರನಗೌಡ ಪಾಟೀಲ ವಹಿಸಿ ಸಸಿಗೆ ನೀರುಣಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸಂಸ್ಥೆಯಲ್ಲಿ ವಾರ್ಷಿಕ 15% ರಷ್ಠಿದ್ದ ಬಡ್ಡಿದರವನ್ನು 14% ರಷ್ಠಕ್ಕೆ ಇಳಿಸಿದ್ದು ಇದರ ಸಂಪೂರ್ಣ ಲಾಭವನ್ನು ಗ್ರಾಹಕರು,ರೈತಭಾಂದವರು ಪಡೆದುಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸನ್ 2022-23ನೇ ಸಾಲಿನ ಎಸ್ ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ,ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಪತ್ರಕರ್ತರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರುಗಳಿಂದ ಸತ್ಕರಿಸಿ, ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಕರೆಪ್ಪ ಪೂಜೇರಿ, ಸದಸ್ಯರಾದ ಪರಗೌಡ ಪಾಟೀಲ, ಸುನೀಲಗೌಡ ಪಾಟೀಲ, ಮಹಾವೀರ ರಾಮತೀರ್ಥ, ವೀರಭದ್ರ ಕಡಕಬಾವಿ, ಅಲಗೌಡ ಆಸಂಗಿ, ಅಪ್ಪಣ್ಣ ಕುಂಬಾರ, ದೊಡ್ಡಕ್ಕ ಪಾಟೀಲ, ಕಲ್ಪನಾ ಸದಲಗಿ, ಜಯಶ್ರೀ ಇಚಲಕರಂಜಿ, ಮಹಾಂತೇಶ ತಳವಾರ, ಸುರೇಶ ಅರಕೇರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವ್ಯವಸ್ಥಾಪಕರಾದ ಎಸ್.ಎಂ.ಮದರಂಖಂಡಿ ಸ್ವಾಗತಿಸಿ, ವಾರ್ಷಿಕ ವರದಿ ವಾಚನ, ಶಿವಾನಂದ ಮಠಪತಿ ಹಾಗೂ ಪ್ರೇಮಾ ನಾಯಿಕ ನಿರೂಪಿಸಿದರು, ಸೃಷ್ಟಿ ಕಾಂಬಳೆ ವಂದಿಸಿದರು.
What's Your Reaction?






