ಹನುಮ ಭಕ್ತರಿಂದ ಹನುಮ ಮಾಲಾ ಧಾರಣೆ

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹನುಮಾನ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ಹನುಮ ಮಾಲಾ ಧಾರಣೆ ಕಾರ್ಯಕ್ರಮ ಜರುಗಿತು.

Dec 18, 2023 - 13:55
Dec 18, 2023 - 13:55
 0  2.5k

ರಾಯಬಾಗ, (RNI) ಪಟ್ಟಣದ ಹನುಮಾನ ಮಂದಿರದಲ್ಲಿ ಐದು ಜೋಡಿ ದಂಪತಿಗಳ ಉಪಸ್ಥಿತಿಯಲ್ಲಿ ಪವಮಾನ ಹೋಮ ಹಾಕಿ ನಂತರ ಪೈ.ಪೂ.ಡಾ. ಅಭಿನವ ಬ್ರಹ್ಮಾನಂದ ಸ್ವಾಮಿಜಿಯವರಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಹನುಮ ಭಕ್ತರು ಮಾಲಾ ಧಾರಣೆ ಮಾಡಿಕೊಂಡರು.  

ನಂತರ ವೇದಿಕೆ ಕಾರ್ಯಕ್ರಮವನ್ನು ಓಂಕಾರ, ರಾಮ ತಾರಕ ಮಂತ್ರ ಹಾಗೂ ಸಾಮೂಹಿಕ ಹನುಮಾನ ಚಾಲಿಸಾ ಪಠಣೆಯೋಂದಿಗೆ ಪ್ರಾರಂಭವಾಯಿತು. ನಂತರ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉತ್ತರ ಪ್ರಾಂತ ಸಂಚಾಲಕ ವಿಠ್ಠಲ ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಉತ್ತರ ಪ್ರಾಂತ ಧರ್ಮಾಚಾರ್ಯ ಪ್ರಮುಖ ವೆಂಕಟೇಶ್ ದೇಶಪಾಂಡೆ ಮಾತನಾಡಿದರು.  ನಂತರ ಪೂಜ್ಯರಾದ ಡಾ. ಅಭಿನವ ಬ್ರಹ್ಮಾನಂದ ಸ್ವಾಮಿಜೀಯವರಿಂದ  ಮಾಲಾಧಾರಿಗಳಿಗೆ ಆಶೀರ್ವಚನ ನೀಡಿದರು.

ಮಾಲಾಧಾರಿಗಳ ಸಂಕೀರ್ತನ ಯಾತ್ರೆ ಶ್ರೀರಾಮ ಜೈರಾಮ್ ಜೈಜೈರಾಮ ಪಠಣೆ, ಜೈಶ್ರೀರಾಮ ಘೋಷಣೆಯೊಂದಿಗೆ ಹನುಮಾನ ಮಂದಿರದಿಂದ ಪಟ್ಟಣದ ರೇಲ್ವೆ ನಿಲ್ದಾಣ, ಕರ್ನಾಟಕ ವೃತ್ತ ಮೂಲಕ ಪೊಲೀಸ್ ಠಾಣೆ ಹನುಮ ಮಂದಿರಕ್ಕೆ ತಲುಪಿ ಹನುಮಾನ್ ಚಾಲೀಸಾ, ಆರತಿ, ಭಜನೆ ನಡೆಸಿ ಹನುಮ ಮಂದಿರಕ್ಕೆ ಮರುಳಿತು ನೆರೆದ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಆಯೋಜಿಸಲಾಗಿತ್ತು .

ಈ ಸಂದರ್ಭದಲ್ಲಿ ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ, ಬಜರಂಗದಳ ಸಂಚಾಲಕ ಆನಂದ ಹೊಸಮನಿ, ಪ್ರಮುಖರಾದ ಮಹಾಂತೇಶ ಹತ್ತರಗಿ,ಮಹೇಶ್ ಹಿರೇಮಠ, ವಿದ್ಯಾಧರ ಕತ್ತಿ, ಅಮೋಲ್ ಅಮಲೆ, ಚೇತನ್ ಗಡಾದಿ, ತಾಲೂಕಾ ಅಧ್ಯಕ್ಷ ಹನುಮಂತ ಯಲಶೆಟ್ಟಿ,ಶೇಖರ ದಳವಾಯಿ, ಶಿವಾನಂದ ಲಖ್ಖನಗಾಂವ ಇತರರು ಉಪಸ್ಥಿತರಿದ್ದರು.

Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z

What's Your Reaction?

like

dislike

love

funny

angry

sad

wow