ಹದಿಗೆಟ್ಟಿರಸ್ತೆ ಹೌಹಾರಿದ ಜನ

ರಸ್ತೆಯನ್ನು ಡಾಂಬರೀಕರಣ ಮಾಡಿ ಒಂದು ತಿಂಗಳಲ್ಲಿ ಕಿತ್ತು ಹೋದರು ರಸ್ತೆ ಗುತ್ತಿಗೆದಾರ ಠಕ್ಕಳಕ್ಕಿ ಅವರುಗೆ ಹಿಡಿ ಶಾಪ ಹಾಕಿದ ತೋಟದ ನಿವಾಸಿಗಳು.

Dec 18, 2023 - 19:00
Dec 18, 2023 - 19:00
 0  3k

ಖಣದಾಳ, (RNI) ರಾಯಬಾಗ ತಾಲೂಕು ಖಣದಾಳ ಗ್ರಾಮದ ವಾರ್ಡ್ ನಂಬರ್ 2ರಲ್ಲಿ ಖಣದಾಳ - ಇಟನಾಳ ಕೂಡುವ ರಸ್ತೆಯಿಂದ ತೇರದಾಳ ತೋಟದಿಂದ ಜಗಲಾಸರ ಕೊಡುವ ಒಳಗಿನ ರಸ್ತೆಯು ಕಳೆದ ಆರು ತಿಂಗಳ ಹಿಂದೆ ಶಾಸಕ ಪಿ. ರಾಜೀವ್ ಅವರು ನೀರಾವರಿ ಇಲಾಖೆಯ ಯೋಜನೆ ಅಡಿಯಲ್ಲಿ 1ಕೋಟಿ 70 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಪೂಜೆ ಮಾಡಿದ್ದರು. ಕಳೆದ ಒಂದು ತಿಂಗಳ ಹಿಂದೆ ಗುತ್ತಿಗೇದಾರ ಭೂಪಾಲ ಠಕ್ಕಳಕಿ ಎನ್ನುವ ಗುತ್ತಿಗೇದಾರರು ತರಾತುರಿಯಲ್ಲಿ ರಸ್ತೆ ಡಾಂಬರೀಕರಣ ಮಾಡಿ ಹೋಗಿದ್ದಾರೆ. ಕಳೆದ 15 ದಿನದಲ್ಲಿ ರಸ್ತೆ ಡಾಂಬರಿಕರಣ ಕಿತ್ತು ಹೋಗಿದೇ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೇವಲ ಒಂದೇ ತಿಂಗಳಲ್ಲಿ ಕಿತ್ತು ಹೋದ ಡಾಂಬರೀಕರಣಕ್ಕೆ ರಸ್ತೆಯಿಂದ ಆಕ್ರೋಶಗೊಂಡ ಸ್ಥಳೀಯರು ಮತ್ತೆ ರಸ್ತೆ ಡಾಂಬರೀಕರಣ ಮಾಡಬೇಕು ಇಲ್ಲವಾದರೆ ನಾವು ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೇದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ರಾಜು ತೇರದಾಳ, ಅಶೋಕ ಮುಗಳಖೋಡ, ಆನಂದ ತೆರದಾಳ, ಲಕ್ಕಪ್ಪ ಹೊಸಟ್ಟಿ, ಅಜಿತ ಹೊಸಟ್ಟಿ,  ಅಡಿವೇಪ್ಪ ಹೊಸಟ್ಟಿ, ಸಾಕ್ಷಾತ್ ತೇರದಾಳ, ಕಲ್ಲಪ್ಪ ಕಲ್ಲಟ್ಟಿ, ಶ್ರೀಶೈಲ ಹಳ್ಳೂರ, ಮಹೇಶ ಹೊಸಟ್ಟಿ ಇತರರು ಇದ್ದರು.

Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0