ಸ್ಕೌಟ್ ಸೇವಾ ರತ್ನ ಪ್ರಶಸ್ತಿ 

Sep 3, 2023 - 15:59
Sep 3, 2023 - 16:06
 0  324
ಸ್ಕೌಟ್ ಸೇವಾ ರತ್ನ ಪ್ರಶಸ್ತಿ 

ಕರ್ನಾಟಕ. (RNI) ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ,ಸ್ಥಳೀಯ ಸಂಸ್ಥೆ ರಾಯಬಾಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರಾಯಬಾಗ, ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕೊಡಮಾಡುವ ಸ್ಕೌಟ್ ಸೇವಾ ರತ್ನ ಪ್ರಶಸ್ತಿಯು ತಾಲೂಕ ಮಟ್ಟದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿಭಾಗದಲ್ಲಿ ಸಲ್ಲಿಸುವ ಸೇವೆಯನ್ನು ಪರಿಗಣಿಸಿ ನೀಡುವ  ಅತ್ಯುನ್ನತ ಪ್ರಶಸ್ತಿ ಇದಾಗಿದೆ, ಹಾರೂಗೇರಿಯ  ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಚನ್ನವೃಷಭೆಂದ್ರ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಸಹ ಶಿಕ್ಷಕ, ಸ್ಕೌಟ್ ಮಾಸ್ಟರ್, ಆರ್ ಎಂ ಕಬ್ಬೂರ ಹಾಗೂ ಹಂದಿಗುಂದ ಗ್ರಾಮದ ಅರಣೊದಯ ಶಿಕ್ಷಣ ಸಂಸ್ಥೆಯ ಸಿ ಎಸ್ ಹಿರೇಮಠ  

ಇವರು ಸನ್ 2023-24 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು  05-09 2023 ರಂದು ರಾಯಬಾಗದಲ್ಲಿ ನಡೆಯಲಿರುವ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯಂದು ನೀಡಲಾಗುವುದು ಎಂದು ತಾಲೂಕಾ ಸಂಸ್ಥೆಯು ತಿಳಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0