ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮಣ್ಣವರ್ ಚಾಲನೆ

ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ

Aug 12, 2023 - 10:13
Aug 12, 2023 - 13:04
 0  702

ರಾಯಬಾಗ(RNI)ರಾಯಬಾಗ  ತಾಲೂಕಿನ ಹಾರೋಗೇರಿ ಕ್ರಾಸ್ ದಿಂದ ಯಬರಟ್ಟಿ ಗ್ರಾಮದವರೆಗೆ ಸುಮಾರು ಮೂರು ಕಿಲೋಮೀಟರ್ ರಸ್ತೆ ತುಂಬಾ ಹಾಳಾಗಿದ್ದು  ರಸ್ತೆಯಲ್ಲಿ ಸಾರ್ವಜನಿಕರಿಗೆ ಸಂಚಾರ ತೊಂದರೆಯಾಗುತ್ತಿದ್ದು ಅದನ್ನು ಮನಗಂಡಂತಹ ಶಾಸಕ ಮಹೇಂದ್ರ ತಮ್ಮನವರ್ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು ಒಂದು ಕೋಟಿ 68  ಲಕ್ಷ ರೂಪಾಯಿ ವೆಚ್ಚದಲ್ಲಿ 3 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮನವರು ಭೂಮಿ ಪೂಜೆಯನ್ನು ನೆರವೇರಿಸಿ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಯಾವುದೇ ರೀತಿ ಕಳಪೆ ಕಾಮಗಾರಿ ಆಗಬಾರದು ಒಂದು ವೇಳೆ ಕಳಪೆ ಕಾಮಗಾರಿ ಎಂದು ಕಂಡುಬಂದಲ್ಲಿ ನಿಮ್ಮ ಬಿಲ್ಲನ್ನು ತಡೆಹಿಡಿಯಲಾಗುವುದು ಎಂದು ಗುತ್ತಿಗೆದಾರನಿಗೆ ಖಡಕ್ ಸೂಚನೆ ನೀಡಿದರು. 

ಸಂದರ್ಭದಲ್ಲಿ ಯಬ್ಬರಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ನಿಜಗುಣಿ ಪಾಟೀಲ, ಉಪಾಧ್ಯಕ್ಷರಾದ ಮಹೇಶ ವಡೆಯರ, ತಮ್ಮನಗೌಡ ಪಾಟೀಲ, ಅಶೋಕ ಒಡೆಯರ, ಶಂಕರ ಗೌಡ ಪಾಟೀಲ, ಮಾರುತಿ ಗಲಗಲಿ, ಸಿದ್ದಾರೂಢ ಹಿಡಕಲ್,ಅಲ್ಲಾಭಕ್ಷಿ ಕುರುಬು, ಆನಂದ ಮೊಳೆ, ನಿಂಗಪ್ಪ ಕುದುರಿ, ಯಲ್ಲಾಲಿಂಗ ಪಾಟೀಲ, ಭೀಮಣ್ಣಚೌಗಲಾ, ಕಲ್ಲಗೌಡ ಪಾಟೀಲ,ಸೋಮನಗೌಡ ಪಾಟೀಲ, ಗುತ್ತೇದಾರಾದ ಪಿ.ಎ. ನಿಂಬಾಳ್ಳರ ಹಾಗೂ ಯಬ್ಬರಟ್ಟಿ ಗ್ರಾಮದ ಗಣ್ಯ ಗುರು ಹಿರಿಯರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow