ಶಾಂತಿಯುತವಾಗಿ ಜರುಗಿದ ಹಾರೂಗೇರಿ ಪಟ್ಟಣದಲ್ಲಿ ಕ್ರಷಿ ಪತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಆಯ್ಕೆಗಾಗಿ ಚುನಾವಣೆ

Dec 17, 2023 - 19:55
Dec 17, 2023 - 19:55
 0  1.4k
ಶಾಂತಿಯುತವಾಗಿ ಜರುಗಿದ ಹಾರೂಗೇರಿ ಪಟ್ಟಣದಲ್ಲಿ ಕ್ರಷಿ ಪತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಆಯ್ಕೆಗಾಗಿ ಚುನಾವಣೆ

ರಾಯಬಾಗ, (RNI) ಬೆಳಗಾಂವಿ ಜಿಲ್ಲೆಯ ರಾಯಬಾಗ ತಾಲೂಕಿನ  ಹಾರೂಗೇರಿಯ ಅತಿದೊಡ್ಡ ಹಾಗೂ ಹಳೆಯ ಸೊಸೈಟಿ ಆಗಿದ್ದು, ಈ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಆಯ್ಕೆಗಾಗಿ ಜುಲೈ 30 ರಂದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾಭಿಮಾನಿ ರೈತ ಪೆನಲ್ ಹಾಗೂ ರೈತ ಹಿತ ರಕ್ಷಣಾ ಪೆನಲ್ ಈ ಎರಡು ಬಣಗಳ ನಡುವೆ ಚುನಾವಣೆ ನಿಗದಿಯಾಗಿತ್ತು ಆದರೆ ಅನೇಕ ಗೊಂದಲ ಮತ್ತುಎರಡು ಬಣಗಳ ನಡುವೆ ಗಲಾಟೆ ನಡೆದು ಚುನಾವಣಾ ಪ್ರಕ್ರಿಯೆ ಅರ್ಧದಲ್ಲೇ ಸ್ಥಗಿತಗೊಂಡಿತ್ತು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಯು ಒಟ್ಟು ೨೩೨೦ ಸದಸ್ಯರನ್ನು ಹೊಂದಿದ್ದು,ಇದರಲ್ಲಿ ಸಾಲಗಾರ ಸದಸ್ಯರ ಸಂಖ್ಯೆ ೨೭೮ ಬಿನ್ನ ಸಾಲಗಾರರ ಸಂಖ್ಯೆ ೨೦೪೨ ಇದ್ದು  ಆದರೆ ಸುಮಾರು 300 ಮತಗಳು ಮುಗಿದ ನಂತರ ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ನಿಂತು ಹೋಗಿತ್ತು.

ನಂತರ ಉಳಿದ ಮತಗಳಿಗೆ ದಿ.ಡಿ 17ರಂದು ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಒಟ್ಟು 1058 ಮತಗಳಲ್ಲಿ 956 ಮತದಾರರು ಮತದಾನ ಮಾಡಿದ್ದು ಪ್ರತಿಶತ 90.36 ರಷ್ಟಾಗಿದೆ ಎಂದು  ಚುನಾವಣಾಧಿಕಾರಿ ಹರೀಶ ಕಾಂಬಳೆ  ಮಾದ್ಯಮಕ್ಕೆ ಮಹಿತಿಯನ್ನು ತಿಳಿಸಿದರು.

ಚುನಾವಣಾ ಪ್ರಕ್ರಿಯೆ ಯಲ್ಲಿ    ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ  ಸಿಪಿಐ ರವಿಚಂದ್ರ ಡಿ.ಬಿ.ಯವರ ನೇತೃತ್ವ ಹಾಗೂ  ಪೊಲೀಸ್ ರ ಸರ್ಪಗಾವಲಿನಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ಚುನಾವಣೆ ಜರುಗಿತು.

ಇದೇ ಸಂದರ್ಭದಲ್ಲಿ ಹಾರೂಗೇರಿ ಪಿಎಸ್ ಐ ಗಿರಿಮಲ್ಲಪ್ಪ ಉಪ್ಪಾರ, ಕುಡಚಿ ಪಿಎಸ್ ಐ ಮಾಳು ಪೂಜೇರಿ, ತನಿಖಾಧಿಕಾರಿ ಆರ್. ಆರ್. ಕಂಗನೊಳ್ಳಿ,ಎ ಎಸ್ ಐ ಅಣ್ಣಪ್ಪ ಮಂಗಸೂಳಿ  ,ಹಣಮಂತ ಗುಡದ ,ಸಿಂಗೆ ಹಾಗೂ ಚಿಕ್ಯಾಕುಂಡೆ  ಸೇರಿದಂತೆ  ಹಾರೂಗೇರಿ, ರಾಯಬಾಗ, ಕುಡಚಿ ಹಾಗೂ ಅಥಣಿ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z

What's Your Reaction?

like

dislike

love

funny

angry

sad

wow