ರಾಯಬಾಗ ತಹಸಿಲ್ದಾರ್ ಕಚೇರಿಯಲ್ಲಿ ಶಿವಶರಣ ನೂಲಿಯ ಚಂದಯ್ಯ ನವರ ಜಯಂತಿಯ ಕಾರ್ಯಕ್ರಮದ ಪೂರ್ವಭಾವಿ ಸಭೆ

Aug 24, 2023 - 17:53
Aug 24, 2023 - 17:58
 0  351

ಬೆಳಗಾವಿ (RNI) ಜಿಲ್ಲೆಯ ರಾಯಬಾಗ ಪಟ್ಟಣ ತಹಶಿಲ್ದಾರ  ಕಚೇರಿಯಲ್ಲಿ ಶಿವಶರಣ ನೂಲಿಯ  ಚಂದಯ್ಯನವರ ಜಯಂತಿಯ ದಿನಾಂಕ 3೦- 8 -2023 ರಂದು ಜರಗಲಿದ್ದು  ಈ ಜಯಂತಿಯ ನಿಮಿತ್ತ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸರ್ಕಲ್ ಇಂದ ಬಾಬು ಜಗಜೀವನ್ ರಾಮ್ ಭವನದವರೆಗೆ  ಶಿವಶರಣ ನೂಲಿ ಚಂದಯ್ಯ ನವರ ಭಾವಚಿತ್ರದ ಭವ್ಯ ಮೆರವಣಿಗೆಯೊಂದಿಗೆ ಶಾಂತಿಯುತವಾಗಿ ನಡೆಯಬೇಕೆಂದು ಈ ಸಭೆಯಲ್ಲಿ ತಹಸಿಲ್ದಾರ್ ಮುಂಜೆ ಅವರು ತಿಳಿಸಿದರು.
ಪಟ್ಟಣದ ಬಾಬು ಜಗಜೀವನ್ ರಾಮ್ ಅವರ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ರಾಜ್ಯ ಉಪಾಧ್ಯಕ್ಷ  ಹನುಮಂತ ಭಜಂತ್ರಿ ಅವರು  ತಿಳಿಸಿದರು
ಇದೇ ಸಂದರ್ಭದಲ್ಲಿ 2022 ನೇ ಸಾಲಿನ ಶಿವಶರಣ ನೂಲಿಯ ಚಂದಯ್ಯ ನವರ ಜಯಂತಿಗೆ ಮಾಡಿದ ಕರ್ಚನ್ನು ಬಿಡುಗಡೆ ಮಾಡುವಂತೆ ಸಮಾಜದ ಎಲ್ಲ ಮುಖಂಡರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು   .
ಬೈಟ್ 1  ಹನುಮಂತ ಭಜಂತ್ರಿ     ಶಿವಶರಣ ನೂಲಿಯ  ಚಂದಯ್ಯ ಸಮಾಜದ ರಾಜ್ಯ ಉಪಾಧ್ಯಕ್ಷರು 
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮುತ್ತಪ್ಪ ಭಜಂತ್ರಿ ಶಿವಪ್ಪ ಭಜಂತ್ರಿ  ಸೋಮು ಭಜಂತ್ರಿ ವಸಂತ ಭಜಂತ್ರಿ ನಿಂಗಪ್ಪ ಭಜಂತ್ರಿ ಭೀಮ ಭಜಂತ್ರಿ ಅನಿಲ್ ಕೊರವಿ ಶಿವಾಜಿ ಭಜಂತ್ರಿ ರಾಮಪ್ಪ ಭಜಂತ್ರಿ ಗೋವಿಂದ ಭಜಂತ್ರಿ ಪೊಪಟ ಭಜಂತ್ರಿ ಪರಸುರಾಮ ಭಜಂತ್ರಿ ರಾಕೇಶ್ ಭಜಂತ್ರಿ ಸೇರಿದಂತೆ ಇನ್ನಿತರ  ಉಪಸ್ಥಿತರಿದ್ದರು

What's Your Reaction?

like

dislike

love

funny

angry

sad

wow