ಮೆಳವಂಕಿ ಗ್ರಾಮದಲ್ಲಿ ಜರುಗಿದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಕಾರ್ಯಕ್ರಮ
ಬೆಳಗಾವಿ (RNI) ಜಿಲ್ಲೆಯ ಗೋಕಾಕ ತಾಲೂಕಿನ ನಳವಂಕಿ ಗ್ರಾಮದಲ್ಲಿ ಓಂ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತ ವೃಂದದವರ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 27ನೇ ವರ್ಷದ ನಿಮಿತ್ಯವಾಗಿ ಓಂ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ,ಮಂಡಲ ಪೂಜೆ, ಎಣ್ಣೆ ಸೇವೆ ,ಅದ್ದೂರಿಯಾಗಿ ಜರುಗಿತು.
ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ವಿಶೇಷ ಅಭಿಷೇಕ ಒಂದು ಗಂಟೆಗಳ ಕಾಲ ಸಡಗರ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹರಿಹರಾನಂದ ಮಹಾಸ್ವಾಮಿಗಳು ಸಿದ್ದಾರೋಡ ಮಠ ಮುತ್ಯಣ್ಣ ಮೆಳವಂಕಿ, ನಾಗೇಶ್ವರ ಚೈತನ್ಯ.
ಮಹಾಸ್ವಾಮಿಗಳು, ಸಿದ್ಧಾರೂಢ ಮಠ ಉಪ್ಪಾರಟ್ಟಿ ಸುರೇಶ್ ಮಹಾರಾಜರು ,ರೇವಣಸಿದ್ದೇಶ್ವರ ಮಹಾರಾಜರು ತಪ್ಸಿ, ಶಂಕರಾನಂದ ಮಹಾಸ್ವಾಮಿಗಳು ಸಿದ್ಧಾರೂಢ ಮಠ ಹಳೆ ಮೆಳವಂಕಿ, ರಾಮಪ್ಪ ಪೂಜಾರಿ ಮಾಳಿಂಗರಾಯ ದೇವ ಋಷಿಗಳು, ಶ್ರೀ ಅಭಿನವ ಧರೇಶ್ವರ ಮಹಾಸ್ವಾಮಿಗಳು ,ಹಠಯೋಗಿ ಲೋಕೇಶ್ವರ ಮಹಾಸ್ವಾಮಿಗಳು, ಅಡವಿ ಸಿದ್ದರಾಮ ಮಹಾಸ್ವಾಮಿಗಳು, ಸೇರಿದಂತೆ ಇನ್ನೂ ಅನೇಕ ಗಣ್ಯರು ಗುರುಸ್ವಾಮಿಗಳು ಹಾಗೂ ಮಾಲಾಧಾರಿಗಳು ಮಹನೀಯರು
ಗೋಕಾಕ ಹಾಗೂ ಮೂಡಲಗಿ ತಾಲೂಕಿನ ವಿವಿಧ ಗ್ರಾಮಗಳಿಂದ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಭಾಗಿಯಾಗಿ ಅಯ್ಯಪ್ಪ ಸ್ವಾಮಿಯ ಜಾತ್ರೆ ಅತಿ ಜೋರಾಗಿ ಜರುಗಿತು
Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z
What's Your Reaction?