ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕ್ಷಮೆ ಯಾಚಿಸಬೇಕು ಎಂದು ಆಗ್ರಹ
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎಐಸಿಸಿ ರಾಷ್ಟೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕ್ಷಮೆ ಯಾಚಿಸಬೇಕು ಅವರ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಸಚಿವರ ಅರಗ ಜ್ಞಾನೇಂದ್ರ ತಮ್ಮ ಮಾತಿನ ಭರದಲ್ಲಿ ಎಐಸಿಸಿ ಅಧ್ಯಕ್ಷರ ಮೈ ಬಣ್ಣದ ಬಗ್ಗೆ ಹಗುರವಾಗಿ ಮಾತನಾಡಿ ತಮ್ಮ ಮನುಸ್ಮೃತಿ ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದಾರೆ ಅವರು ಆಡಿರುವ ಮಾತುಗಳಿಂದ ಇಡಿ ದಲಿತ ಸಮುದಾಯಕ್ಕೆ ಎಸಗಿರುವ ದೊಡ್ಡ ಅಪಮಾನವಾಗಿದೆ ಈ ಕೂಡಲೆ ಆರಗ ಜ್ಞಾನೇಂದ್ರ ಅವರು ಆಡಿರುವ ಮಾತಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಸಮಿತಿಯಿಂದ ರಾಯಬಾಗದಲ್ಲಿ ಆಗ್ರಹಿಸಲಾಯಿತು.
ಆರಗ ಜ್ಞಾನೇಂದ್ರ ಅವರು ಮಾತನಾಡುವಾಗ ತಮ್ಮ ಮಾತಿನ ಮೇಲೆ ಹಿಡಿತವಿರಬೇಕು ಎಂದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷರಾದ ನಾಮದೇವ ಕಾಂಬಳೆ ರಾಯಬಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರವಣಕುಮಾರ ಕಾಂಬಳೆ ಜಿಲ್ಲಾ ಕಾಂಗ್ರೆಸ್ ಎಸ್ಸಿ ಉಪಾಧ್ಯಕ್ಷರಾದ ದೀಲಿಪ ಪಾಯನ್ನವರ ಜಿಲ್ಲಾ ಸಮಿತಿ ಸದಸ್ಯರಾದ ಕಾಡೇಶ ಐಹೊಳೆ ಯುವ ಮುಖಂಡರಾದ ಶ್ರೀ ಅಣ್ಣಪ್ಪ ಅಸೋದೆ ಮೀಲಿಂದ ಚಿಂಚಲಿಕರ ವಿಠಲ ತಳವಾರ ಪ್ರೇಮ್ ಕಾಂಬಳೆ ಚೇತನ ಕಾಂಬಳೆ ಲಕ್ಷ್ಮಣ ಕಾಂಬಳೆ ವಿನಾಯಕ ಕಾಂಬಳೆ ಮಂಜುನಾಥ ಕಾಂಬಳೆ ಸಾಮಾಜಿಕ ಜಾಲತಾಣಗಳ ಉಪಾಧ್ಯಕ್ಷರಾದ ಪ್ರಶಾಂತ ಕಾಂಬಳೆ ಹಾಗೂ ಅಪಾರ ಕಾಂಗ್ರೆಸ್ ಮುಖಂಡರು ಕಾಯ೯ಕತ೯ರು ಉಪಸ್ಥಿತರಿದ್ದರು.
What's Your Reaction?