ಬರಗಾಲ ಘೋಷಣೆ-ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದ ಕಂದಾಯ ಸಚಿವ ಕೃಷ್ಣಭೈರೇಗೌ

ವಿಚಾರದಲ್ಲಿ ನಮಗೆ ಯಾವ ಗೊಂದಲವೂ ಇಲ್ಲ. ರೈತರನ್ನು ಕನಫ್ಯೂಸ್ ಮಾಡಿದ್ದು ಕೇಂದ್ರ ಸರ್ಕಾರ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

Sep 15, 2023 - 17:13
Sep 15, 2023 - 17:13
 0  540

ನಗರದಲ್ಲಿಂದು (RNI) ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾವು ನಿನ್ನೆ ಬರಗಾಲ ಘೋಷಣೆ ಮಾಡಿದ್ದೇವೆ. 195  ತಾಲೂಕು ಬರಗಾಲ ಎಂದು ಘೋಷಣೆ ಮಾಡಿದ್ದೇವೆ. ಇದಕ್ಕೆ ಒಂದುವರೆ ತಿಂಗಳಿಂದ  ಕೆಲಸ ಮಾಡಿ ಬರಗಾಲ ಘೋಷಣೆ ಮಾಡಿದ್ದೇವೆ‌. ಕೇಂದ್ರ ಸರ್ಕಾರದ ಮಾನದಂಡಗಳಿಕೆ ಕೆಲ ತಾಲೂಕುಗಳು ಬರುತ್ತಿಲ್ಲ ಎಂದರು.

ನಮಗೆ ಸರಿ ಮಾಡೋಕೆ ಯಾವ ಪ್ರತಿಷ್ಠೆ ಇಲ್ಲ‌. ಕೇಂದ್ರ ಸರ್ಕಾರದ ನಾರ್ಮ್ಸ್ ಪ್ರಕಾರ ನಾವು ಮಾಡಿದ್ದೇವೆ. ಇದೇ ಅಂತಿಮ ಅಲ್ಲ, ತಿಂಗಳ ಕೊನೆಯಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎಂದು ಅವರು ಹೇಳಿದರು.

ಜುಲೈ 1 ನೇ ವಾರದಲ್ಲಿ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ರು. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಬರಗಾಲ ಘೋಷಣೆ ಮಾಡೋದ ಕಷ್ಟ. ಅಂತಹ ಸವಾಲಿನ ಮಧ್ಯೆಯೂ ನಾವು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಬದಲಾವಣೆ ಮಾಡಬೇಕು. ಕೇಂದ್ರ ಪ್ರತಿಷ್ಠ ಬಿಡಬೇಕು ಎಂದ ಬೈರೇಗೌಡ ಆಗ್ರಹಿಸಿದರು.

ಮುಖ್ಯಮಂತ್ರಿಗಳ ಪತ್ರಕ್ಕೆ ಇನ್ನು ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಿಗಳು ಕರ್ನಾಟಕದ ಸಮಸ್ಯೆ ಕುರಿತು ಚರ್ಚೆ ಮಾಡೋಕೆ ಅವಕಾಶ ಕೊಡಬೇಕು ಎಂದ ಅವರು, ಈ ತಿಂಗಳ ಕೊನೆಯಲ್ಲಿ ಬರಗಾಲದ ಮಾನದಂಡ ಪರಿಶೀಲನೆ ಮಾಡುತ್ತೇವೆ ಎಂದು ಅವರು ಹೇಳಿದರು.

ಹುಬ್ಬಳ್ಳಿಯ ತಹಶಿಲ್ದಾರ ಕಚೇರಿ,ಸಬ್ ರಿಜಿಸ್ಟರ್ ಕಚೇರಿಯಲ್ಲಿ ಪರಿಶೀಲನೆ ಮಾಡಿದ್ದೇನೆ. ಇಲಾಖೆಯಲ್ಲಿ ಹೇಗೆ ಸುಧಾರಣೆ ತರೋ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇನೆ.‌ ಕಂದಾಯ ಇಲಾಖೆಯಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಆಗಬೇಕು.. ಸರಿಯಾಗಿ ಕೆಲಸ ಶದ್ರೆ ಜನ ನೆಮ್ಮದಿಇಂದ ಇರ್ತಾರೆ.
ಹೊಸ ಸರ್ಕಾರ ಬಂದಿದೆ ಜನಪರ ಆಡಳಿತ ಇರಬೇಕು.
ಹಳೇ ಸರ್ಕಾರ ಹೋಗಿ ಹೊಸ ಸರ್ಕಾರ ಬಂದಿದೆ.
ಹಳೇ ಸರ್ಕಾರದ ತರಹ ನಾವು ಇರಬಾರದು. ಹೀಗಾಗಿ ಆಡಳಿತದಲ್ಲಿ ಬದಲಾವಣೆ ತರಲು ಸಿಎಂ  ಸೂಚನೆ ಕೊಟ್ಟಿದ್ದಾರೆ ಎಂದರು.

ರಾಜ್ಯದಲ್ಲಿ ಉಪವಿಭಾಗ ಅಧಿಕಾರಿಗಳ ಹಂತದಲ್ಲಿ 32 ಸಾವಿರ ಪ್ರಕರಣ ಪೆಂಡಿಂಗ್ ಇತ್ತು. ಆದ್ರೆ ನಾವು ಮೂರು ತಿಂಗಳಲ್ಲಿ 16 ಸಾವಿರ ಫೈಲ್ ಕ್ಲೀಯರ್ ಮಾಡಿದ್ದೇವೆ. ಇವತ್ತು ಐದು ವರ್ಷಕ್ಕಿಂತ ಹೆಚ್ಚು ಪ್ರಕರಣಗಳಿದ್ವು. ನಾವು ಅಧಿಕಾರಕ್ಕೆ ಬಂದ ಮೇಲೆ 16 ಸಾವಿರ ಫೈಲ್ ವಿಲೇವಾರಿ ಮಾಡಿದ್ದೇವೆ ‌. ಡಿಸಿ, ಎಸಿ ತಹಶಿಲ್ದಾರ ಹಂತದಲ್ಲಿ ಬಾಕಿ ಇರೋ ಯಾವ ಫೈಲ್ ಕೂಡಾ ಪೆಂಡಿಂಗ್ ಇರಬಾರದು ಎಂದು ಸೂಚನೆ ಕೊಟ್ಟಿದ್ದೇವೆ. ನಮ್ಮ ಕಚೇರಿಗಳಲ್ಲಿ ಕಡತ ವಿಲೇವಾರಿ ಬಹಳ ನಿಧಾನ.
ಒಂದು ಕಡತ ಕಳಿಸಲು ಎರಡು ತಿಂಗಳು ತಗೋತಾರೆ. ಉತ್ತರ ಕೊಡೊಕೆ ನಾಲ್ಕು ತಿಂಗಳು ಬೇಕು.

ಆಕ್ಟೋಬರ್ 1 ರಿಂದ ತಹಶಿಲ್ದಾರ ಲೇವಲ್ ವರೆಗೂ E ಆಫೀಸ್ ಅಳವಡಿಸಿಬೇಕು‌. ಇದು ಫ್ಯಾಶನ್ ಗಾಗಿ ಅಲ್ಲ,ಕಡತ ವಿಲೇವಾರಿಗಾಗಿ..
ಕೆಲವು ಕಡೆ ಜನರ ಫೈಲ್ ಕಳೆದುಹೋಗಿವೆ.ಆನಲೈನ್ ಸಿಸ್ಟಮ್ ಅಲ್ಲಿ ಫೈಲ್ ಕಳೆದುಹೋಗಲು ಸಾಧ್ಯವಿಲ್ಲ.. ನಾವು ಸವಾಲಾಗಿ ತಗೆದುಕೊಂಡು ಇ  ಆಫೀಸ್ ಅಳವಡಿಕೆಗೆ ಮುಂದಾಗಿದ್ದೇವೆ.
ಕೆಲವು ದಾಖಲೆ ಪಡೆಯೋದು ಹರಸಾಹಸ ಆಗಿದೆ. ನಕಲಿ ದಾಖಲೆಗಳನ್ನು ತರೋದು ವ್ಯಾಪಕವಾಗಿದೆ. ಸರ್ಕಾರದ ಜಾಗಕ್ಕೆ ನಕಲಿ ದಾಖಲೆಗಳನ್ನ ತರೋದು ವ್ಯಾಪಕವಾಗಿ ಹಬ್ಬಿದೆ ಎಂದ ಕೃಷ್ಣ ಬೈರೇಗೌಡ ಅಸಮಧಾನ ವ್ಯಕ್ತಪಡಿಸಿದರು.


ಹಣ ಆಡಳಿತದ ಒಂದು ಭಾಗವಾಗಿ ಬಿಟ್ಟಿದೆ. ವಿವಿಧ ಹಂತಗಳಲ್ಲಿ ಹಣ ಆಡಳಿತದ ಒಂದು ಭಾಗ ಆಗಿದೆ.  ಲಂಚ ಇಲ್ಲದೆ ಏನೂ‌ಇಲ್ಲದೆ ಕೆಲಸ ಆಗಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು ಪರೋಕ್ಷವಾಗಿ ಲಂಚ ಇದೆ ಅನ್ನೋದನ್ನ ಒಪ್ಪಿಕೊಂಡರು. ಒಳ್ಳೆ ಕೆಲಸ ಮಾಡಿದ ಅಧಿಕಾರಿಗಳಿಗೆ ಪ್ರಶಸ್ತಿ ಕೊಡ್ತೀವಿ. ತಪ್ಪ ಕೆಲಸ ಮಾಡಿದ್ರೆ ಅವರ ವಿರುದ್ದ ಕಾನೂನು ಕ್ರಮ ಎಂದರು.

What's Your Reaction?

like

dislike

love

funny

angry

sad

wow