ಪಾಲಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಕಿಯರಿಗೆ ಶೌಚಾಲವೇ ಇಲ್ಲ...! ಶೌಚಕ್ಕೆ ಭಯಲೇ ಗತಿ
ನಾವು ಬೆಳೆದು ದೊಡ್ಡವಳಾದ ಹೆಣ್ಣು ಮಕ್ಕಳು ಬಯಲಿಗೆ ಶೌಚಕ್ಕೆ ಹೋಗೋದು ನಮಗೆ ಮುಜುಗರ ತರುತ್ತಿದೆ, ನಾಚಿಕೆ ಆಗುತ್ತಿದೆ ನಮ್ಮ ಶಾಲೆಗೆ ಬಾಲಕಿಯರ ಶೌಚಾಲಯ ಕಟ್ಟಿಸಿ ಕೊಡಿರಿ: ಐಶ್ವರ್ಯ ಜನವಾಡ.
(RNI) ಸರ್ಕಾರವು ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿದ್ದು ಆಗಿದೆ, ಆದರೇ ಕಳೆದ ಒಂದುವರೆ ವರ್ಷಗಳಿಂದ ಶೌಚಾಲಯವಿಲ್ಲದೆ ಮುಜುಗರ ಪಟ್ಟುಕೊಂಡು ಅಸಹ್ಯ ಪಟ್ಕೊಂಡು ಬಯಲಲ್ಲಿ ಶೌಚಕ್ಕೆ ಹೋಗುವಂತ ದೌರ್ಭಾಗ್ಯವು ಪಾಲಬಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಬಂದಿದೆ.
ರಾಯಬಾಗ ತಾಲೂಕು ಪಾಲಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ನರೇಗಾ ಯೋಜನೆ ಅಡಿಯಲ್ಲಿ ಪ್ರತ್ಯೇಕ ಹೈಟೆಕ್ ಶೌಚಾಲಯ ಕಟ್ಟಿಸುತ್ತೇವೆಂದು ಗ್ರಾಮ ಪಂಚಾಯತಿಯವರು ಕಳೆದ ಒಂದು ವರ್ಷಗಳ ಹಿಂದೆ ಹೇಳಿ ಅಲ್ಲಿಯೇ ಇರುವ ಹಳೆಯ ಬಾಲಕಿಯರ ಶೌಚಾಲಯವನ್ನು ನೆಲಸಮಗೊಳಿಸಿದರು. ಹೊಸ ಶೌಚಾಲಯ ಕಟ್ಟಿಸಿಕೊಡುತ್ತೇವೇ. ಎಂದು ಹೇಳಿ ಹೋದವರೂ ಇನ್ನೂ ನಮಗೆ ಶೌಚಾಲಯ ಕಟ್ಟಿಸಿ ಕೊಟ್ಟಿರುವುದಿಲ್ಲ. ನಮ್ಮ ಶಾಲೆಯಲ್ಲಿ 364 ಹೆಚ್ಚು ವಿದ್ಯಾರ್ಥಿಗಳಿದ್ದು, ಅದರಲ್ಲಿ ಅತಿ ಹೆಚ್ಚು 217 ಸಂಖ್ಯೆಯಷ್ಟು ಬಾಲಕಿಯರೇ ಇದ್ದೇವೆ. ಆದರೂ ನಮಗೆ ಪ್ರತ್ಯೇಕ ಶೌಚಾಲಯ ಇಲ್ಲ. ಕಳೆದ ದಿ: 06ರಂದು ಗ್ರಾಮ ಪಂಚಾಯತಿಯವರು ನಮ್ಮ ಶಾಲೆಯಲ್ಲಿ ವಿಶೇಷ "ಮಕ್ಕಳ ಗ್ರಾಮಸಭೆ" ಕರೆದಾಗ ನಮಗೆ ಜರೂರು ಪ್ರತ್ಯೇಕ ಬಾಲಕಿಯರಿಗೆ ಶೌಚಾಲಯ ಕಟ್ಟಿಸಿಕೊಡಿ ಎಂದು ಮನವಿ ಮಾಡಿದ್ದೇವೆ. ಶಿಕ್ಷಣ ಇಲಾಖೆಯವರು ಶಾಲೆಗೆ ಬರ್ತಾರೆ ಹೋಗ್ತಾರೆ. ಆದರೇ ನಮಗೆ ಶೌಚಾಲಯ ಇಲ್ಲದ್ದು ಅವರಿಗೆ ಅರಿವು ಬಂದಿರುವುದಿಲ್ಲ. ಗ್ರಾಮ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಯವರಲ್ಲಿ ನಾವು ಕೇಳಿಕೊಳ್ಳುವುದೇನೆಂದರೆ ನಮಗೆ ಜರೂರು ಬಾಲಕಿಯರ ಶೌಚಾಲಯ ಕಟ್ಟಿಸಿಕೊಡಬೇಕು ಎಂದು 8ನೇ ವರ್ಗದ ವಿದ್ಯಾರ್ಥಿನಿ ಐಶ್ವರ್ಯ ಜನವಾಡ, ಶ್ವೇತಾ ಅಂಬಿ, ಲಕ್ಷ್ಮಿ ನಿಂಗನೂರ ಮಾಧ್ಯಮದವರ ಮೂಲಕ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಬಾಕ್ಸ್ ಲೈನ್
"ಪಾಲಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿ ಹೆಚ್ಚು ಬಾಲಕಿಯರೇ ಇರುವುದು, ಅವರಿಗೆ ಪ್ರತ್ಯೇಕ ಶೌಚಾಲಯ ಇಲ್ಲವೆಂದು ಸಾರ್ವಜನಿಕರಿಂದ ಮಾಹಿತಿ ಬಂದಿದೆ, ಶಾಲೆಯ ಪ್ರಧಾನ ಗುರುಗಳಿಂದ ಮಾಹಿತಿ ಪಡೆದು, ತಾಲೂಕ ಪಂಚಾಯತ ಇಒ ಅವರಿಗೆ ಪತ್ರ ಬರೆದು ಪಾಲಬಾವಿ ಸರಕಾರಿ ಹಿರಿಯ ಶಾಲೆಗೆ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯವನ್ನು ಕಟ್ಟಿಸಿಕೊಡುವ ಪ್ರಯತ್ನ ಮಾಡುತ್ತೇನೆ"
ಆರ್.ಬಸವರಾಜಪ್ಪ (ಬಿಇಓ ರಾಯಬಾಗ)
ಬಾಕ್ಸ್ ಲೈನ್
"ಕಳೆದ ಎರಡು ವರ್ಷಗಳ ಹಿಂದೆ ನರೇಗಾ ಯೋಜನೆ ಅಡಿಯಲ್ಲಿ ಪಾಲಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಕಿಯರಿಗಾಗಿ ವಿಶೇಷ ಹೈಟೆಕ್ ಶೌಚಾಲಯವನ್ನು ಕಟ್ಟಿಸಲು ಎಸ್ಟಿಮೆಂಟ್ ಪ್ಲಾನ್ ಮಾಡಿದ್ದೆವು, ಆದರೆ ಅಂದಿನ ಬಿಇಓ ಪ್ರಭಾವತಿ ಪಾಟೀಲ ಅವರು ತಾವು ಗ್ರಾಮ ಪಂಚಾಯತ್ ನಿಂದ ಶೌಚಾಲಯ ಕಟ್ಟಿಸಬೇಡಿರಿ. ನಮ್ಮ ಶಿಕ್ಷಣ ಇಲಾಖೆಯಿಂದ ಬಾಲಕಿಯರಿಗೆ ವಿಶೇಷ ಹೈಟೆಕ್ ಶೌಚಾಲಯವನ್ನು ಕಟ್ಟಿಸುತ್ತೇವೆ ಅಂತ ಹೇಳಿದ್ದರು
Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z
What's Your Reaction?






