ನೇಗಿಲಯೋಗಿ ರೈತ ಫೆನಲ್ ಗೆ ಭರ್ಜರಿ ಗೆಲುವಿನವು ಖಚಿತ: ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ ವಿಶ್ವಾಸ

Dec 18, 2023 - 18:48
Dec 18, 2023 - 18:49
 0  4.2k

(RNI)63 ವರ್ಷಗಳಿಂದ ಸಂಘವು ಆಡಳಿತ ಮಂಡಳಿಯ ನಿರ್ದೇಶಕರನ್ನ ಅವಿರೋಧ ಆಯ್ಕೆ ಮಾಡುತ್ತಾ ಬಂದಿದ್ದೆವು. ಆದರೇ ನಮ್ಮವರಲ್ಲಿ ಭಿನ್ನಾಭಿಪ್ರಾಯಗಳ ಬಂದ ಕಾರಣ ಚುನಾವಣೆ ಅನಿವಾರ್ಯವಾಗಿದೆ: ರೈತ ಮುಖಂಡ ಮಲ್ಲಪ್ಪ ಅಂಗಡಿ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮದಲ್ಲಿ 16.03. 1960 ರಲ್ಲಿ ಸ್ಥಾಪನೆಗೊಂಡಿರ ತಕ್ಕಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಇಂದಿಗೆ 63 ವರ್ಷಗಳು ತುಂಬುತ್ತಿವೆ, ಸಂಘವು ಸ್ಥಾಪನೆ ಆದಾಗಿನಿಂದ ಸಂಘದ ಆಡಳಿತ ಮಂಡಳಿಯ ಚುನಾವಣೆ ಆಗದೇ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆಯಾಗುತ್ತ ಬಂದಿರುವುದು ಒಕ್ಕತ್ತಿನ ಸಂಕೇತವಾಗಿತ್ತು.  ಆದರೆ ಈ 2023ರ ವರ್ಷದಲ್ಲಿ ಗ್ರಾಮದ ರೈತರಲ್ಲಿ ಭಿನ್ನಾಭಿಪ್ರಾಯಗಳು ಬಂದ ಕಾರಣ, ಒಮ್ಮತ ಇಲ್ಲದ ಕಾರಣದಿಂದ ಅನಿವಾರ್ಯವಾಗಿ ನಾವು ಸಂಘದ ಚುನಾವಣೆಯನ್ನು ನಡೆಸುವ ಹಂತಕ್ಕೆ ಬಂದಿದ್ದೇವೆ. ನೇಗಿಲಯೋಗಿ ರೈತ ಫೆನಲ್ ಮೂಲಕ ಉಮೇದುವಾರಿಕೆಯನ್ನು ಸಲ್ಲಿಸಿದ್ದು ಎಲ್ಲ 12 ಜನ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತಗಳ ಗೆಲುವು ಪಡೆಯಲಿದ್ದೇವೆ ಎಂದು ಚಿಕ್ಕೋಡಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ ಹೇಳಿದರು.

ಅವರು ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮದ ವಿವಿದ್ಯೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (ನಿ) ಸನ್. 2023 -24ನೇ ಸಾಲಿನಲ್ಲಿ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸುದ್ದಿಗಾರನ್ನ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಪರಪ್ಪ ಬಂಗಿ, ಬಾಲಪ್ಪ ನಾಯಿಕ, ಲಕ್ಷ್ಮಣ ಕೂಡಲಗಿ, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ, ಗುರುಪಾದ ಚೌಗಲಾ, ಮಹಾದೇವ ನಾಯಿಕ, ರಾಯಬಾಗ ತಾಲೂಕು ರೈತ ಸಂಘದ ಅಧ್ಯಕ್ಷ ರಮೇಶ ಕಲ್ಲಾರ, ಬರಮಪ್ಪ ಬಾಗೋಜಿ, ಪುಟ್ಟುಗೌಡ ನಾಯಿಕ, ಗಂಗಪ್ಪ ಕುರನಿಂಗ, ನ್ಯಾಯವಾದಿ ಎಸ್.ಎಸ್.ಮುಶಿ, ಭೀಮಪ್ಪ ಮಂಟೂರ, ಬಾಹುಬಲಿ ಮುನ್ಯಾಳ, ಶಿವಪ್ಪ ದಡ್ಡಿಮನಿ, ಗುರು ಅಂಗಡಿ, ನ್ಯಾಯವಾದಿ ಎಸ್.ಜಿ.ಕಲ್ಲಾರ, ಅಶೋಕ ಚೌಗಲಾ, ನಾಗಪ್ಪ ನಿಡುಗುಂದಿ, ವಿವೇಕಾನಂದ ಮುಸಿ, ರಾಜು ಹುಕ್ಕೇರಿ, ದುಂಡಪ್ಪ ಪಾಟೀಲ, ಈರಪ್ಪ ಬಂಗಿ, ಹನುಮಂತ ಮಂಟೂರ, ಕೆಂಪಣ್ಣ ಕುರನಿಂಗ, ಪ್ರಭಾಕರ ದಿವಾಕರ, ಮಂಜು ಮೇತ್ರಿ, ಗಂಗಪ್ಪ ಐದುಮನಿ, ಬಾಳಪ್ಪ ಐದಮಣಿ, ಧರೆಪ್ಪ ಬಿರಾಜ, ಶೇಖರ ಅಂಗಡಿ, ಶೇಖರ ಸಂಕನಟ್ಟಿ, ಶ್ರೀಶೈಲ ಕೂಡಲಗಿ, ಮುತ್ತಪ್ಪ ಬದ್ರಶೆಟ್ಟಿ, ರಾಮು ಖಾನಗೊಂಡ, ಬಾಳಪ್ಪ ದಡ್ಡಿಮನಿ, ಧರೇಪ್ಪ ಬಿಲ್ಕಾರ, ಬಾಳಪ್ಪ ದೊಡ್ಡಮನಿ, ಮಹಾದೇವ ಮಂಗಳೂರ, ಯಮನಪ್ಪ ಮೇಳವಂಕಿ, ಗೋಪಾಲ ಅಂಗಡಿ, ಭರಮಪ್ಪ ಉದ್ದಪ್ಪಗೋಳ, ಮಾದೇವ ಅಂಗಡಿ, ಪ್ರಹ್ಲಾದ ಬಳಗಾರ ಇತರರು ಇದ್ದರು.

Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z

What's Your Reaction?

like

dislike

love

funny

angry

sad

wow