ನಾಳೆ ಗೋಕಾಕದಲ್ಲಿ ಅಯೋಧ್ಯೆಯ ಮಂತ್ರಾಕ್ಷತಾ ಕಲಶದ ಶೋಭಾ ಯಾತ್ರೆ
ಗೋಕಾಕ, (आरएनआई) ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದು ಪರಿಷತ್ ಗೋಕಾಕ ಇವರಿಂದ ಗೋಕಾಕದ ಕೆಎಲ್ಇ ಶಾಲೆಯಲ್ಲಿ ಆಯೋಜಿಸಿದ ಪತ್ರಿಕಾಗೋಷ್ಟಿಯಲ್ಲಿ ಶ್ರೀ ರಾಮ ಪ್ರತಿಷ್ಟಾಪನಾ ಅಭಿಯಾನ ಜಿಲ್ಲಾ ಸಂಯೋಜಕ ನಂಜುಂಡ ಜುಗುಳಿ ಮಾತನಾಡಿ 22 ಜನೇವರಿ 2024 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಅಯೋಧ್ಯೆ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮ ಜನ್ಮಭೂಮಿ ಮಂತ್ರಾಕ್ಷತೆ ಕಲಶ ಗೋಕಾಕ ನಗರಕ್ಕೆ ದಿನಾಂಕ 20-12-2023 ರಂದು ಬೆಳಿಗ್ಗೆ 9.00 ಘಂಟೆಗೆ ಆದಿಜಾಂಬವ ನಗರದಲ್ಲಿರುವ ಶ್ರೀ ವಾಲ್ಮೀಕಿ ದೇವಸ್ಥಾನಕ್ಕೆ ಆಗಮಿಸಲಿದೆ.
ಅಲ್ಲಿ ಮಂತ್ರಾಕ್ಷತಾ ಕಲಶವನ್ನು ಶೃದ್ಧಾಪೂರ್ವಕ ಸ್ವಾಗತಿಸಿ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯ ಮೂಲಕ ರವಿವಾರ ಪೇಟೆಯಲ್ಲಿರುವ ಶ್ರೀ ರಾಮ ಮಂದಿರಕ್ಕೆ ತರಲಾಗುವುದು. ಜನೇವರಿ 1 ರಿಂದ ಜನೇವರಿ 15ರ ವರೆಗೆ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಎಲ್ಲ ಮನೆಗಳಿಗೆ ಭೇಟಿಯಾಗಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆ, ಶ್ರೀ ರಾಮ ಭಾವಚಿತ್ರ ಹಾಗೂ ಆಮಂತ್ರಣ ಪತ್ರ ನೀಡಲಾಗುವುದು.
ಜಿಲ್ಲಾದ್ಯಂತ ಎಲ್ಲ ಗ್ರಾಮಗಳ ಎಲ್ಲ ಮನೆಗಳ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ.ನಗರದ ಸಮಸ್ತ ನಾಗರಿಕರು ನಾಳಿನ ಶೋಭಾ ಯಾತ್ರೆಯಲ್ಲಿ ಹಾಗೂ ನಂತರದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಂಡರು. ಈ ಸಂಧರ್ಭದಲ್ಲಿ ಉತ್ತರ ಪ್ರಾಂತ್ಯದ ಸತ್ಸಂಗ ಪ್ರಮುಖರಾದ ನಾರಾಯಣ ಮಠಾಧಿಕಾರಿ,ವಿಶ್ವ ಹಿಂದೂ ಪರಿಷತ ಜಿಲ್ಲಾ ಉಪಾಧ್ಯಕ್ಷ ಕೃಷ್ಣಾ ಕುರುಬೆಟ್, ನಗರ ಅಧ್ಯಕ್ಷರಾದ ಆನಂದ ಪಾಟೀಲ ಉಪಸ್ಥಿತರಿದ್ದರು.
Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z
What's Your Reaction?






