ನಮ್ಮ ಊರಿನ ಸಂಘದ ಜೊತೆಗೆ ವ್ಯವಹಾರ ಮಾಡಿ ನಮ್ಮ ರೈತರಿಗೆ ನಮ್ಮ ಬ್ಯಾಂಕಿನ ಪ್ರಯೋಜನ ಆಗಬೇಕು ಎಂದು ಎನ್ ಕರಿಯನ್ನವರ್ ಬ್ಯಾಂಕ್ ನಿರೀಕ್ಷಕರು ಉಡಚಿ ಹೇಳಿದರು

Sep 16, 2023 - 21:46
Sep 16, 2023 - 21:46
 0  297

ಕರ್ನಾಟಕ. (RNI) ಇಂದು ಶ್ರೀ ಕರಿ ಸಿದ್ದೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಎಲ್ಲಟ್ಟಿ ತೋಟ ಅಲಕನೂರ್ ಸಭಾಂಗಣದಲ್ಲಿ ನಡೆದ 12ನೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು ನಮ್ಮ ಸಹಕಾರಿ ಸಂಘ ಹತ್ತು ಹಲವು ರೈತರ ಯೋಜನೆಗಳನ್ನು ನೀಡುತ್ತಿದ್ದು ಬಡ್ಡಿ ರಹಿತ ಸಾಲ ಟ್ರ್ಯಾಕ್ಟರ್ ಸಾಲ ಪೈಪ್ಲೈನ್ ಸಾಲ ಇನ್ನು ಹಲವಾರು ಸಾಲಗಳನ್ನು

ರೈತರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ನೀಡುತ್ತದೆ ನಮ್ಮ ಗ್ರಾಮದ ರೈತರು ನಮ್ಮ ಸಂಘದಲ್ಲಿಯೇ ಎಲ್ಲಾ ವ್ಯವಹಾರವನ್ನು ಮಾಡಿ ನಮ್ಮೂರಿನ ಸಂಘಗಳನ್ನು ಬೆಳೆಸಿ ಎಲ್ಲರೂ ಲಾಭಾಂಶವನ್ನು ಹಂಚಿಕೊಳ್ಳೋಣ ಎಂದರು ನಮ್ಮ ಬ್ಯಾಂಕಿನಿಂದ ರೈತರಿಗೆ ನೇರವಾಗಿ ಜೆಸಿಬಿ ಟ್ರ್ಯಾಕ್ಟರ್ ರಿಕ್ಷಾ ದ್ವಿಚಕ್ರ ವಾಹನ ಗುಂಪು ಸಾಲ ಹಲವಾರು ರೀತಿಯಲ್ಲಿ ಅತ್ಯಂತ ಕಡಿಮೆ ರೀತಿಯಲ್ಲಿ ಸಾಲ ಸೌಲಭ್ಯವು ಇದ್ದು ನೀವು 10% ನೀಡಿದರೆ ನಾವು 90 % ಸಾಲ ನೀಡಿ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಅದರಂತೆ ಮನೆ ಸಾಲ ಸೌಲಭ್ಯವು ಇದ್ದು ಈ ಎಲ್ಲಾ ಸೌಲಭ್ಯಗಳನ್ನು ನಿಮ್ಮ ಗ್ರಾಮದ ಸಂಘಗಳಲ್ಲಿ ವ್ಯವಹಾರ ಮಾಡಿ ಆರ್ಥಿಕವಾಗಿ ರೈತರು ಸದೃಢರಾಗಬೇಕೆಂದು ಹೇಳಿದರು ಇದೇ ಸಂದರ್ಭದಲ್ಲಿ ಕಲ್ಮೇಶ್ ತಿಗಡಿ ವರದಿ ವಾಚನ ಮಂಡಿಸಿದರು ಇದೇ ಸಂದರ್ಭದಲ್ಲಿ ಶ್ರೀಧರ್ ಪಾಟೀಲ್ ಹೆಚ್ಚುವರಿ ಬ್ಯಾಂಕ್ ನಿರೀಕ್ಷಕರು ಕುಡುಚಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಿಯಪ್ಪ ಯಲ್ಲಟ್ಟಿ ಅಧ್ಯಕ್ಷರು ಪಿಕೆಪಿಎಸ್ ಬಾಬು ಮುತ್ತೂರ್ ಉಪಾಧ್ಯಕ್ಷರು ನಿರ್ದೇಶಕರಾದ ಅಪ್ಪಣ್ಣ ಹಾಲ್ಗುಣಿ ಲಕ್ಷ್ಮಣ್ ಎಲ್ಲಟ್ಟಿ ಮಲ್ಲಪ್ಪ ಯಲ್ಲಟ್ಟಿ ಕರಿಯಪ್ಪ ಸರೋವ್ ಮುರಿಗೆಪ್ಪ ಇಂಗಳಿ ಸತ್ಯಪ್ಪ ಮಾಂಗ್ ಸುನಿಲ್ ಕೆಂಪವಾಡಿ ಕೃಷ್ಣ ಕಾಂಬಳೆ ಕಾರ್ಯದರ್ಶಿ ಪಿಕೆಪಿಎಸ್ ಹಾಗೂ ಸಂಘದ ಎಲ್ಲಾ ಸೇರಿದಾರರು ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow