ತಮ್ಮ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಮಾಡುವುದು ಸರಿಯಲ್ಲ ಮಹದೇವ ಹೋಳ್ಕರ್
ರಾಯಬಾಗ. (आरएनआई) ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಅದ್ಯಕ್ಷ ಮಾತನಾಡಿ ಯಾವುದೇ ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕೋಸ್ಕರ ರೈತರನ್ನು ಬಲಿ ತೆಗೆದುಕೊಳ್ಳುವುದು ತುಂಬಾ ದುರದೃಷ್ಟಕರ ವಿಷಯ ಇದನ್ನು ನಾವು ಖಂಡಿಸುತ್ತೇವೆ
ಇತ್ತೀಚಿಗೆ ರಾಜ್ಯ ಸರ್ಕಾರದ ಸಚಿವರು ರೈತರು 5 ಲಕ್ಷಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳುವುದರ ಮುಖಾಂತರ ರೈತ ಕುಲಕ್ಕೆ ಅವಮಾನ ಮಾಡಿದ್ದಾರೆ ಅವರ ಕುಡಲೆ ಕ್ಷಮೆ ಕೆಳಲಿ ಎಂದು ಹರಿಹಾಯ್ದರು.
ಇದನ್ನೇ ಬಂಡವಾಳವಾಗಿಟ್ಟುಕೊಂಡು ಪ್ರತಿಪಕ್ಷದ ನಾಯಕರು ತಮ್ಮ ರಾಜಕೀಯ ಲಾಭಕ್ಕೋಸ್ಕರ ಪಕ್ಷದ ಕೈ ಬೆರಳೆಣಿಕೆ ಎಷ್ಟು ಕಾರ್ಯಕರ್ತರನ್ನು ಕರೆದುಕೊಂಡು ಅವರಿಗೆ ಹಸಿರು ಶಾಲು ಹೊಂದಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದು ವಿಷಾದನೀಯ ಇವರು ಮಾಡುತ್ತಿರುವುದು ರೈತರ ಪರ ಹೋರಾಟ ಎಂದು ಬಿಂಬಿಸಿಕೊಳ್ಳುತ್ತಾ ಯಾವುದೇ ಒಬ್ಬ ರೈತನನ್ನು ಹಾಗೂ ರೈತಪರ ಸಂಘಟನೆಗಳಿಗೂ ಮಾಹಿತಿ ನೀಡದೆ ಕಾಟಾಚಾರಕ್ಕೆ ಅನ್ನುವಂತೆ ರಾಯಬಾಗ ತಾಲೂಕಿನ ಎರಡು ಮತ ಕ್ಷೇತ್ರಗಳ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಪ್ರತಿಭಟನೆ ಮಾಡುವುದು ಎಷ್ಟರಮಟ್ಟಿಗೆ ಸರಿ ಮಾಹಾದೇವ ಹೊಳಕರ ಪ್ರಶ್ನಿಸಿದ್ದರು.
What's Your Reaction?






