ಕೃಷ್ಣಾ ನದಿಯಲ್ಲಿ ಬಿದ್ದ ಬಾಲಕ ಶವವಾಗಿ ಪತ್ತೆ
ಕೃಷ್ಣಾ ನದಿಯಲ್ಲಿ ಬಿದ್ದ
ಬೆಳಗಾಂವಿ. (RNI) ರಾಯಬಾಗ ತಾಲೂಕಿನ ಕುಡಚಿಯ ಗಡ್ಡೆ ಪ್ರದೇಶದ ಹಜರತ ಶಿರಾಸಾಹೇಬ ದರ್ಗಾ ದರ್ಶನಕ್ಕೆ ಬಂದಾಗ ಬಾಲಕ ಕೃಷ್ಣಾ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.
ಬೆಳಗಾವಿ ಗಾಂಧಿನಗರ ನಿವಾಸಿ ಹುಸೇನ ನಿಸಾರಅಹ್ಮದ ಅರ್ಕಾಟೆ ಎಂಬ 21ವರ್ಷದ ಯುವಕ ತಮ್ಮ ಗೆಳೆಯರೊಂದಿಗೆ ರಾಯಬಾಗ ತಾಲೂಕಿನ ಕುಡಚಿಯ ಗಡ್ಡೆ ಪ್ರದೇಶದ ಶಿರಾಸಾಹೇಬ ದರ್ಗಾ ದರ್ಶನಕ್ಕೆಂದು ರವಿವಾರ ಬಂದಿದ್ದರು. ಆ ಸಮಯದಲ್ಲಿ ಇನ್ನೇನು ದರ್ಶನ ಪಡೆದು ಊಟ ಮುಗಿಸಿ ಹೊರಡುವ ಸಮಯದಲ್ಲಿ ಹುಸೇನ ಅರ್ಕಾಟೆ ತನ್ನ ಎರಡು ಜನ ಗೆಳೆಯರೊಂದಿಗೆ ದರ್ಗಾದ ಪಕ್ಕಕ್ಕೆ ಇರುವ ಕೃಷ್ಣಾ ನದಿ ನೋಡಲು ದಡಕ್ಕೆ ಹೋಗಿ ಕಟ್ಟೆಗಳ ಮೂಲಕ ನೀರಿಗೆ ಇಳಿದಿದ್ದಾರೆ.
ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ನೀರಿನ ಆಳ ತಿಳಿಯದ ಇವರು ನೀರಿನಲ್ಲಿ ಮುಳುಗಿದ್ದಾರೆ. ನೀರಿಗೆ ಬಿದ್ದ ಇವರು ಕೂಗುವಷ್ಟರಲ್ಲಿ ಅಲ್ಲೇ ಇದ್ದ ಮೀನುಗಾರರು ರಕ್ಷಣೆಗೆ ಧಾವಿಸಿದ್ದಾರೆ. ನೀರಿಗೆ ಇಳಿದು ರಕ್ಷಣೆಗೆ ಇಳಿದ ಮೀನುಗಾರರು ಎರಡು ಜನರನ್ನು ರಕ್ಷಣೆ ಮಾಡುವಷ್ಟರಲ್ಲಿ ಹುಸೇನ ಅರ್ಕಾಟೆ ಎಂಬ ಬಾಲಕ ಆಳದ ನೀರಿನಲ್ಲಿ ಸಂಪೂರ್ಣ ಮುಳಗಿ ಹೋಗಿದ್ದಾನೆ ಅಷ್ಟರಲ್ಲೇ ಇವರೊಂದಿಗೆ ಇದ್ದ ಹತ್ತಕ್ಕೂ ಹೆಚ್ಚು ಗೆಳೆಯರ ತಂಡ ಘಟನಾ ಸ್ಥಳಕ್ಕೆ ಬಂದಿದ್ದಾರೆ.
ರವಿವಾರ ಹಾಗೂ ಸೋಮವಾರದ ಸಂಜೆವರೆಗೂ ಕುಡಚಿ ಪೊಲೀಸ್, ಅಗ್ನಿಶಾಮಕ ದಳ ಹಾಗೂ ಎಚ.ಇ.ಎಮ.ಎಫ, ತಂಡ ದೋಣಿ ಮೂಲಕ ಶೋಧ ಕಾರ್ಯದಲ್ಲಿ ತೊಡಗಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ ಸಂಜೆ ಹೊತ್ತಿಗೆ ಎಸಡಿಆರ.ಎಫ ತಂಡದವರು ಕ್ಯಾಮೆರಾ ಬಳಸಿ ಶೋಧ ಕಾರ್ಯದಲ್ಲಿ ತೊಡಗಿದಾಗ ಸಂಜೆ 5.30 ಸುಮಾರಿಗೆ ಬಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನತದೃಷ್ಟ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ಶೋಧ ಕಾರ್ಯಾಚರಣೆಯಲ್ಲಿ ಕುಡಚಿ ಪಿಎಸ್ಐ ಮಾಳಪ್ಪ ಪೂಜಾರಿ, ಎಎಸ್ಐ ಕೆ. ಎಸ. ಸಾಳುಂಕೆ
ಹವಾಲ್ದಾರ್ ಸತೀಶ್ ಡಂಗೆಣ್ಣವರ ಕಾರ್ಯನಿರ್ವಹಿಸಿದರು.
ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
What's Your Reaction?






