ಕುಡಚಿಯಲ್ಲಿ ರಂಗ ಪಂಚಮಿ, ರಂಜಾನ್ ಹಬ್ಬದ ಶಾಂತಿ ಪಾಲನಾ ಸಭೆ ಜರುಗಿತು

ರಾಯಬಾಗ (RNI) ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆಯಲ್ಲಿ ಸಿಪಿಐ ರವೀಂದ್ರನ ಬಿ. ಅವರ ನೇತೃತ್ವದಲ್ಲಿ ಠಾಣೆ ವ್ಯಾಪ್ತಿಯ ಗ್ರಾಮಗಳ ರಂಗಪಂಚಮಿ ಹಾಗೂ ರಂಜಾನ ಹಬ್ಬದ ಶಾಂತಿ ಪಾಲನಾ ಸಭೆ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ರವೀಚಂದ್ರನ ಬಡಫಕೀರಪ್ಪಗೋಳ ಈ ವರ್ಷ ಹೋಳಿ ಹಬ್ಬ ರಂಜಾನದಲ್ಲಿ ಬಂದಿದ್ದು ರಾಸಾಯನಿಕ ಬಣ್ಣಗಳನ್ನು ಬಳಸದೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಯಾರನ್ನು ನೋಯಿಸದಂತೆ ಹೋಳಿ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸೋಣ ಬಣ್ಣ ಆಡುವಾಗ ಯಾವುದೇ ಜಾತಿ ಪಂತದವರಾಗಲಿ ಅವರು ನಿರಾಕರಣೆ ಮಾಡಿದ್ದಲ್ಲಿ ಬಣ್ಣ ಹಚ್ಚಬಾರದು, ಹಬ್ಬವನ್ನು ಭಾತೃತ್ವದ ಸಂಕೇತವಾಗಿ ಆಚರಿಸೋಣ ಎಂದರು.
ಯುವಕರು ಸೋಶೀಯಲ ಮೇಡಿಯಾದಲ್ಲಿ ಹೆಚ್ಚಾಗಿ ಕಾಲ ಕಳೆಯುವುದರಿಂದ ಏನೇನೋ ಸ್ಟೇಟಸ ಹಾಗೂ ಯಾವುದೇ ಪ್ರಚೋದನಕಾರಿ ಪೋಸ್ಟನ್ನು ಹಾಕದಂತೆ ನಿಗಾ ವಹಿಸಬೇಕು ಜೊತೆಗೆ ಈಗಾಗಲೇ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸೋಷಿಯಲ್ ಮೇಡಿಯಾದಲ್ಲಿ ರಾಜಕೀಯ ಪೋಸ್ಟ್ ಹಾಕಬಾರದು.
ಎಲ್ಲರೂ ಪ್ರಜಾಪ್ರಭುತ್ವಕ್ಕೆ ತಲೆ ಬಾಗಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನ್ಯಾಯಸಮ್ಮತ ಚುನಾವಣೆಗೆ ಅನುವು ಮಾಡಿಕೊಡಬೇಕು ಎಂದರು.
ಹೆಚ್ಚಿನ ಅಪಘಾತಗಳಲ್ಲಿ ತಲೆಗೆ ಭಾರಿ ಏಟಿನಿಂದ ಸಾವುಗಳು ಸಂಭವಿಸುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಹೇಲ್ಮೇಟ ಧರಿಸುವ ಮೂಲಕ ಆಗುವ ಜೀವ ಹಾನಿಯನ್ನು ತಡೆಗಟ್ಟಬೇಕೆಂದು ತಿಳಿಸಿದರು.
ಇದೇ ವೇಳೆ ಡಾ. ಸಚೀನ ಮನಗುತ್ತಿ, ಪಿ.ಎಸ.ಐ. ಮಾಳಪ್ಪ ಪೂಜೇರಿ, ತನಿಖಾ ಪಿ.ಎಸ.ಐ. ಕಲ್ಮೇಶ ಬನ್ನೂರ ಮಾತನಾಡಿದರು.
ಈ ಸಂದರ್ಭದಲ್ಲಿ ಕುಡಚಿ, ಮೊರಬ, ಚಿಂಚಲಿ ಪರಮಾನಂದವಾಡಿ, ಸಮಾಜ ಪ್ರಮುಖರು, ಮುಖಂಡರು, ಗ್ರಾಮಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು.
Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z
What's Your Reaction?






