ಕರ್ತವ್ಯದ ಜೊತೆಗೆ ಪರಿಸರ ರಕ್ಷಣೆಗೆ ಮುಂದಾದ ಹಾರೂಗೇರಿ ಸಿಪಿಐ ರವಿಚಂದ್ರನ್
ರಾಯಬಾಗ. (RNI) ಕೊರೋನಾ ಎಂದರೆ ಎಲ್ಲರೂ ಭಯಬೀಳುವುದು ಸಹಜ ಯಾಕೆಂದರೆ ಕಳೆದ ಎರಡು ವರ್ಷಗಳ ಹಿಂದೆ ಭಯಂಕರ ಅನುಭವವನ್ನು ನೀಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ ಕೊರೋನಾ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದ ಜಗತ್ತಿನಾದ್ಯಂತ ಸಾವಿರಾರು ಜನ ಸಾವಾಗಿರುವುದನ್ನು ಕಂಡಿದ್ದೇವೆ ಆದರೂ ಕೂಡ ಜನರಿಗೆ ಇನ್ನೂ ಆಕ್ಸಿಜನ್ ಬಗ್ಗೆ ಮನವರಿಕೆಯಾಗದೆ ಮರಗಳ ಮೇಲೆ ದೌರ್ಜನ್ಯ ಎಸುಗುತ್ತಿರುವುದು ವಿಷಾದನೀಯ ವಿಷಯ.
ಹೌದು ವೀಕ್ಷಕರೇ ಇಲ್ಲೊಬ್ಬ ಪೊಲೀಸ್ ವೃತ್ತ ನಿರೀಕ್ಷಕ ತಮ್ಮ ಕರ್ತವ್ಯದ ಜೊತೆಗೆ ಪರಿಸರ ಬಗ್ಗೆ ಅಪರೂಪ ಕಾಳಜಿ ತೋರಿಸುತ್ತಿರುವುದು ಒಂದು ವಿಶೇಷ ಸಂಗತಿ. ಹಾಗಾದರೆ ಈ ವರದಿ ಎಲ್ಲಿಯದು ಪೋಲಿಸ್ ವ್ರತ ನಿರೀಕ್ಷಕರು ಯಾರು ಎನ್ನುವುದು ತಿಳಿತೆವೆ ಈ ವರದಿ ತಪ್ಪದೆ ನೋಡಿ .
ನಿನ್ನೆಯ ದಿನ ತಮ್ಮ ಕರ್ತವ್ಯ ಜೊತೆಗೆ ರಸ್ತೆ ಬದಿ ಇರುವ ಮರಗಳನ್ನು ಗಮನಿಸುತ್ತಾ ಹಾರೋಗೇರಿ ಪಟ್ಟಣವನ್ನು ಸಂಚರಿಸುತ್ತಿದ್ದಾಗ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಇರುವ ಒಂದು ಮರಕ್ಕೆ ನೂರಾರು ಮಳೆಗಳು ಪೋಸ್ಟರ್ಗಳು ಲೈಟ್ ಅಳವಡಿಸುವುದನ್ನು ಗಮನಿಸಿದ ಸಿಪಿಐ ರವೀಂದ್ರನ ಬಡಫಕೀರಪ್ಪಗೋಳ ಮರಕ್ಕೆ ಹೊಡೆದಿರುವ ಮಳೆಗಳನ್ನು ಕಿತ್ತು ತಮ್ಮ ಪರಿಸರ ಕಾಳಜಿಯನ್ನು ತೋರಿದ್ದಾರೆ.
ಇದನ್ನು ಗಮನಿಸಿದ ಸಾರ್ವಜನಿಕರು ಒಂದು ಕ್ಷಣ ಚಕಿತರಾಗಿ ರವಿಚಂದ್ರನ್ ಅವರಿಗೆ ಹತ್ತು ಹಲವು ಪ್ರಶ್ನೆಗಳನ್ನು ಮಾಡಿದರು ಅದಕ್ಕೆ ಉತ್ತರ ನೀಡುತ್ತಾ, ಮರಕ್ಕೆ ಹೊಡೆದ ಹತ್ತಾರು ಮಳೆಗಳನ್ನು ಕಿತ್ತು ಸಾರ್ವಜನಿಕರಿಗೆ ಮನುಷ್ಯನಷ್ಟೇ ಪ್ರಮುಖ ಪಾತ್ರ ಮರಗಳದಿದೆ ಮರಗಳ ಸಂರಕ್ಷಣೆಯೇ ಮಾನವ ಕುಲದ ಸಂರಕ್ಷಣೆಯಾಗಿದೆ ಎಂದು ತಿಳುವಳಿಕೆಯ ಮಾತನ್ನು ಹೇಳಿದರು.
ರಸ್ತೆಯ ಪಕ್ಕದಲ್ಲಿರುವ ನಮ್ಮ ಮನೆ ಹಾಗೂ ಅಂಗಡಿಯ ಮುಂದಿನ ಮರಗಳಿಗೆ ನೀರು ಹಾಕಿ ಅವುಗಳಿಗೆ ಯಾರು ಮೊಳೆ ಹೊಡೆಯದಂತೆ ರಕ್ಷಣೆ ಮಾಡಿ ಇದರಿಂದ ಮರಗಳು ನಮಗೆ ಉಚಿತವಾಗಿ ದಿನಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಉಚಿತ ಆಕ್ಸಿಜನ್ ಹಾಗೂ ಬಿಸಿಲಿನ ಸಮಯದಲ್ಲಿ ನೆರಳನ್ನು ನೀಡುವ ಮರಗಳಿಗೆ ಪ್ರತಿಯೊಬ್ಬರು ರಕ್ಷಣೆ ಮಾಡುವುದು ಅವರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾನೂನಿನ ಪ್ರಕಾರ ಮರಗಳಿಗೆ ಮೊಳೆ ಹೊಡೆಯುವುದು ಲೈಟ್ ಹಾಕುವುದು ಅಪರಾಧ ನಮ್ಮ ತಪ್ಪು ತಿಳುವಳಿಕೆಯಿಂದ ಅಮಾಯಕ ಮರಗಳಿಗೆ ಯಾಕೆ ಶಿಕ್ಷೆ ನೀಡುತ್ತೀರಿ ಪ್ರತಿಯೊಬ್ಬರೂ ಜಾಗೃತರಾಗಿ ಪರಿಸರ ರಕ್ಷಣೆಯ ಪಣ ತೊಟ್ಟು ಪರಿಸರ ರಕ್ಷಣೆಯೇ ಜೀವಜಲದ ರಕ್ಷಣೆ ಎಂಬ ಧ್ಯೇಯ ತಿಳಿದು ಪರಿಸರ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಸಾರ್ವಜನಿಕರಿಗೆ ತಿಳಿಹೇಳಿ.
ನಾನು ಚಿಕ್ಕಂದಿನಿಂದಲೂ ಮರಗಳನ್ನು ನೆಡುವುದು ಬೆಳೆಸುವುದು ಮಾಡುತ್ತಾ ಬಂದಿದ್ದೇನೆ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಎಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಆದುದರಿಂದ ಪ್ರತಿಯೊಬ್ಬರು ಜಾಗೃತರಾಗಿ ಪರಿಸರ ರಕ್ಷಣೆಗೆ ಪಣ ತೊಡೋಣಾ ಎಂದರು.
ಇವರ ಈ ಪರಿಸರ ಕಾಳಜಿಯನ್ನು ಕಂಡು ಅಲ್ಲಿ ಇದ್ದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು ಅವರು ಹೇಳುವುದು ಅಷ್ಟೇ ಸತ್ಯ ಎಂದು ತಮ್ಮ ತಮ್ಮಲ್ಲಿ ಮಾತನಾಡತೊಡಗಿದರು.
What's Your Reaction?






