ಅಳಗವಾಡಿಯಲ್ಲಿ ತಾಲೂಕಾ ಮಟ್ಟದ ಥ್ರೋ ಬಾಲ ಪಂದ್ಯಾವಳಿ ಮುಕ್ತಾಯ

Sep 3, 2023 - 15:55
Sep 3, 2023 - 15:55
 0  405

ರಾಯಬಾಗ ತಾಲೂಕಿನ (RNI) ಅಳಗವಾಡಿ ಗ್ರಾಮದ ಕ್ರಾಂತಿ ವೀರ ಸಂಗೋಳಿ ರಾಯಣ್ಣ  ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮೈದಾನದಲ್ಲಿ ತಾಲೂಕಾ ಮಟ್ಟದ ಥ್ರೋ ಬಾಲ ಪಂದ್ಯಾವಳಿ ಜರುಗಿದವು.

ಕ್ಷೇತ್ರ ಶಿಕ್ಷಾಣಾಧಿಕಾರಿ ಶಾಂತಾರಾಮ ಜೋಗಳೆ ಥ್ರೋ ಬಾಲ ಏಸೆಯುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸ್ಪರ್ಧೆ ಯಾವುದೇ ಆಗಿರಲಿ ಒಂದು ತಂಡ ಗೆಲ್ಲಬೇಕಾದರೆ ಇನ್ನೊಂದು ತಂಡ ಸೋಲಲೇಬೇಕಾಗುತ್ತದೆ  ಇದರಿಂದ ಸೋತ ತಂಡ ಕುಗ್ಗದೆ  ಗೆದ್ದ ತಂಡ ಅತಿ ವಿಜ್ರಂಬಿಸದೆ ಸೋಲು ಗೆಲುವನ್ನು ಸಮಾನವಾಗಿ ಸ್ವಿಕರಿಸುವುದೆ  ಜೀವನದ ಮಹತ್ವವಾದ  ಗುಟ್ಟು ಎಂದು ಹೇಳಿದರು .

ಇದೆ ಸಂದರ್ಭದಲ್ಲಿ ದೈಹಿಕ ಶಿಕ್ಷಕರು ಕೂಡಾ ಯಾವುದೇ ಮಕ್ಕಳಿಗೆ ತಾರತಮ್ಯ ಮಾಡದೇ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹ ನೀಡಿ ಗೌರವಿಸಿ ಎಂದು ಸಲಹೆ ನೀಡಿದರು.

ಪ್ರಾಥಮಿಕ ವಿಭಾಗದಲ್ಲಿ ಬಾಲಕ ಮತ್ತು ಬಾಲಕಿಯರ ಕೆ ವ್ಹಿ  ಎಸ್  ಆರ್ ಅಳಗವಾಡಿ ಶಾಲೆ,  ಪ್ರೌಢ ಶಾಲೆ ಬಾಲಕರ ವಿಭಾಗದಲ್ಲಿ ಬೀರೇಶ್ವರ ಪ್ರೌಢ ಶಾಲೆ ಆಯ್ಕೆಯಾದರೆ ಕೆವ್ಹಿ ಎಸ್ ಆರ್ ಪ್ರೌಢ ಶಾಲೆ ಅಳಗವಾಡಿ ಬಾಲಕಿಯರು ಜಿಲ್ಲಾ ಮಟ್ಟಕ್ಕೆ  ಆಯ್ಕೆಯಾದರು.

ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಯೂ ಮೂಖ್ಯವಾಗಿದೆ ಕಾರಣ ಪ್ರತಿ ಮಗು ಒಂದಿಲ್ಲ‌ ಒಂದು  ಕ್ರೀಡೆಯಲ್ಲಿ ಭಾಗವಹಿಸಿ  ತಮ್ಮ ಬೌದ್ಧಿಕ ಮಟ್ಟದ ಜೊತೆಗೆ ಶಾರೀರಿಕ ಆರೋಗ್ಯವನ್ನು ಕಾಪಾಡಿಕೋಳುವುದು ಮುಖ್ಯ ಎಂದು ತಾಲೂಕಾ ದೈಹಿಕ ಪರಿವೀಕ್ಷಕ ಎಮ್  ಪಿ ಜೀರಗಿಹಾಳ ಹೇಳಿದರು .

ಈ ಸಂದರ್ಭದಲ್ಲಿ ಹಣಮಂತ ಬೆನ್ನಾಡೆ ,ಶಿವಾನಂದ  ಹುಲಗಬಳಿ ,ಸುಲೆಮನ್ ಶೇಖ‌,ಸಂಸ್ಥೆಯ ಅದ್ಯಕ್ಷ ಆರ್ ಹೆಚ್   ಶಿರಗೂರೆ , ಕಿರಣ ಶಿರಗೂರೆ,ಪರಶುರಾಮ ಶಿರಗೂರೆ, ಹಣಮಂತ ಪೂಜಾರಿ ,ಬಿ ಬಿ  ಬ್ಯಾಕೂಡ , ಎಚ್ ಎಂ ಮೆಟಗಾರ  ಪ್ರಾಥಮಿಕ ಹಾಗೂ ಪ್ರೌಡ ಶಾಲೆಯ ದೈಹಿಕ  ಶಿಕ್ಷಕರು ಶಿಕ್ಷಕಿಯರು ಮಕ್ಕಳು ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow