ಅಥಣಿಯಲ್ಲಿ ಸಿಎಂ ಗೆ ಕಪ್ಪು ಬಟ್ಟೆ ಪ್ರದರ್ಶನದ ಭೀತಿ 

ಅಥಣಿಯಲ್ಲಿ ಸಿಎಂ ಗೆ ಕಪ್ಪು ಬಟ್ಟೆ ಪ್ರದರ್ಶನದ ಭೀತಿ 

Aug 10, 2023 - 20:06
Aug 10, 2023 - 20:48
 0  243

ಬೆಳಗಾವಿ : (RNI) ಹಲವು ದಶಕಗಳಿಂದ ರಸ್ತೆ ಕಾಣದೆ ಮಹಿಳೆಯರು ಮಕ್ಕಳು ಪರದಾಡುವಂತಾಗಿದೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು ಪ್ರಯೋಜನವಾಗಿಲ್ಲ ನಮಗೆ ರಸ್ತೆ ಬೇಕು ಇಲ್ಲದೆ ಹೋದಲ್ಲಿ ಸಿಎಂ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶನ  ಮಾಡುವುದಾಗಿ ಮಹಿಳೆಯರು ಆಕ್ರೋಶ ಹೊರಹಕಿದ್ದಾರೆ.

ಹೌದು,,, ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನ ಸಭಾ ವ್ಯಾಪ್ತಿಯ ಚಂದ್ರಪ್ಪಾವಾಡಿ ಗ್ರಾಮದ ನಿಕಮ ಹಾಗೂ ನಾಯಿಕ ತೋಟದ ಜನರ ಗೋಳು ಇದು

ಗ್ರಾಮದಿಂದ ಸುಮಾರು ಎರಡು ಕಿ ಮೀ ಅಂತರದಲ್ಲಿರುವ ತೋಟಕ್ಕೆ ರಸ್ತೆ ಇಲ್ಲ ಅಧಿಕಾರಿಗಳಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ರಸ್ತೆ ಮಾಡಿ ಕೊಡಿ ಅಂದ್ರೆ ಸರ್ಕಾರಿ ಜಾಗದಲ್ಲಿ ರಸ್ತೆ ಮಾಡಿ ಕೊಡಲು ಆಗುವುದಿಲ್ಲ ಎಂದು ಸ್ಪಷ್ಟ ಉತ್ತರ ನೀಡ್ತಾರೆ,

ಬೇರೆಯವರಿಗೆ ಬಾವಿ,ಹಾಗೂ ಇತರೆ ಕೆಲಸ ಮಾಡಲು
ಸರ್ಕಾರಿ ಜಾಗ ಬಳಸಬಹುದು ಅದ್ರೆ ನಮಗೆ ರಸ್ತೆ ಅನಿವಾರ್ಯತೆ ಇದೆ ಅಧಿಕಾರಿಗಳು ವಿನಾಮೆಶ ಎನಿಸುತ್ತಿರುವುದು ಏಕೆ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ

ಈ ಕುರಿತಂತೆ ಹಲವು ಪತ್ರಿಕೆ ಹಾಗೂ ಸುದ್ದಿ ಮಾದ್ಯಮದಲ್ಲಿ ವರದಿ ಯಾದ್ರು ಅಧಿಕಾರಿಗಳು ಕಿವಿ ಗೋಡುತ್ತಿಲ್ಲ ಬದಲಿಗೆ " ರಸ್ತೆ ವಿಷಯಕಕ್ಕೆ ಬಂದ್ರೆ ಪೊಲೀಸ್ ಲಾಠಿ ರುಚಿ ತೋರೀಸಬೆಕಾಗುತ್ತೆ " ಅಂತಾ ಬೆದರಿಕೆ ಹಾಕುತ್ತಿದ್ದಾರಂತೆ

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಸವರೋ ಅಧಿಕಾರಿಗಳ ವರ್ತನೆಯಿಂದ ಸ್ಥಳೀಯರು ಬೇಸತ್ತು
ನಾಳೆ ನಡೆಯಲಿರುವ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಪಶು ವೈದ್ಯಕೀಯ ಮಹಾ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಎಚ್ಚರಿಕೆ ನೀಡಿದ್ದಾರೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0