ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸರಕಾರಿ ಫ್ರೌಢ ಶಾಲೆ ದತ್ತು ಪಡೆದ ಶಾಸಕ ಮಹೇಂದ್ರ ತಮ್ಮನ್ನವರ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸರಕಾರಿ ಫ್ರೌಢ
ರಾಯಬಾಗ ತಾಲೂಕಿನ (RNI) ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ 77ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಾಡಿನ ಜನತೆಗೆ ಶುಭಾಶಯ ತಿಳಿಸಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡುವ ಮೂಲಕ ಶಾಸಕರನ್ನಾಗಿ ಮಾಡಿದ್ದು ಕ್ಷೇತ್ರದ ಕುರಿತು ನನ್ನದೇ ಆದ ಕನಸು ಹೊಂದಿದು ಚುನಾವಣೆಯ ಸಂದರ್ಭದಲ್ಲಿ ನಾನು ಜನತೆಗೆ ನೀಡಿದ ಮಾತಿನಂತೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕುಡಚಿ ಮತಕ್ಷೇತ್ರದ ಅಳಗವಾಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಸ್ತವಾಡ ಗ್ರಾಮದ ಪ್ರೌಢ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ನನ್ನ ಮೊದಲ ವೇತನವನ್ನು ಈ ಶಾಲೆಗೆ ನೀಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ನೀಡಿದ ಪ್ರತಿ ಭರವಸೆಗಳನ್ನು ಒಂದೊ ಒಂದದಾಗಿ ಈಡೇರಿಸುವಲ್ಲಿ ಹಾಗೂ ಕುಡಚಿ ಕ್ಷೇತ್ರವನ್ನು ನನ್ನದೇ ಆದ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆಂದು ಹೇಳಿದರು.
ಇದೆ ಸಂದರ್ಭದಲ್ಲಿ ಜೋತೆಪ್ಪ ಪಾಟೀಲ ಕೃಷ್ಣ ಲಠ್ಠೆ ಶ್ರೀಕಾಂತ ವಡಗಾವೆ ಪ್ರದೀಪ ಹಾಲಗುಣಿ ಗೋಪಾಲ ಕಾಂಬಳೆ ಸುಖದೇವ ಕಾಂಬಳೆ ಮುಖ್ಯೋಪಾಧ್ಯಾಯರು ಶ್ರೀಶೈಲ ಚೌಗಲಾ ಮಾರುತಿ ಲಠ್ಠೆ ರಾಘು ದೇವಮಾನೆ ಮಾದೇವ ಪಾಟೀಲ ಹಾಗೂ ಶಾಲೆಯ ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು
What's Your Reaction?






