ಸ್ಟೀಲ್ ಪೈಪ್ ಸಾಗಿಸುತ್ತಿದ್ದ ಲಾರಿ ಪಲ್ಟಿ,ಚಾಲಕ ಸಾವು,ಕ್ಲೀನರಗೆ ಗಂಭೀರ ಗಾಯ

ಚಿಕ್ಕೋಡಿ. (RNI) ನಿಪ್ಪಾಣಿಯ ಪುಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾವಂದಿ ಘಾಟನ ಇಳಿಜಾರಿನಲ್ಲಿ ಸ್ಟೀಲ್ ಪೈಪ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದರೆ,ಕ್ಲೀನರ್ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಚಾಲಕ ಪ್ರದೀಪ್ (50) ಮೃತಪಟ್ಟ ಚಾಲಕ, ರಂಗನಾಥನ್ (20) ಗಂಭೀರವಾಗಿ ಗಾಯಗೊಂಡ ಕ್ಲೀನರ್ ಎಂದು ತಿಳಿದು ಬಂದಿದೆ.
ಲಾರಿ ಬೆಂಗಳೂರಿನಿಂದ ಮುಂಬೈಗೆ ಹೋಗುತ್ತಿತ್ತು. ಲಾರಿ ಅಪಾಯಕಾರಿ ತಿರುವುನಲ್ಲಿ ವಾಹನ ನಿಯಂತ್ರಣ ತಪ್ಪಿತು. ಇದರಿಂದ ಡಿವೈಡರ್ ಮೇಲೆ ಲಾರಿ ಪಲ್ಟಿಯಾಗಿದೆ.
ಇದರಿಂದ ಲಾರಿಯಲ್ಲಿದ್ದ ಸ್ಟೀಲ್ ಪೈಪ್ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದು ಎರಡೂ ಕಡೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಲಾರಿ ಸುಮಾರು ಇನ್ನೂರು ಅಡಿ ಕೆಳಗೆ ಬಿದ್ದಿದೆ.ಅದರಲ್ಲಿ ಚಾಲಕ ಸಾವನ್ನಪ್ಪಿದ್ದಾನೆ. ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಪಘಾತದ ಮಾಹಿತಿ ಬಂದ ತಕ್ಷಣ ರಸ್ತೆ ನಿರ್ವಹಣಾ ಕಂಪನಿಯ ಭರಾರಿ ತಂಡದ ಇನ್ಸ್ ಪೆಕ್ಟರ್ ಅಕ್ಷಯ ಸರಾಪುರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ...ಘಟನಾ ಸ್ಥಳದ ಮಾಹಿತಿ ಮೇರೆಗೆ ಸಿಪಿಐ ಬಿ. ಎಸ್. ತಳವಾರ, ಸಬ್ ಇನ್ಸ್ ಪೆಕ್ಟರ್ ಉಮಾದೇವಿ ಭೇಟಿ ನೀಡಿ ಪರಿಶೀಲಿಸಿದರು.
What's Your Reaction?






