ಸರ್ಕಾರದ ಜಾಗ ನುಂಗಿದ ಸರ್ಕಾರಿ ವೈದ್ಯ ಡಾ ಶ್ರೀಕಾಂತ-ನಿಂಗಪ್ಪ ಕಡಬಾವಿ ಆರೋಪ
ಬೆಳಗಾಂವಿ. (RNI) ಮುಗಳಖೊಡ ಪುರಸಭೆ ಭಜಂತ್ರಿ ಕಾಲೋನಿಯ ಜನರಿಗೆ ತಮ್ಮ ಮನೆಯಿಂದ ಮುಖ್ಯ ರಸ್ತೆಗೆ ಬರಲು ದಾರಿ ಈಗ ಮಾಯ ಅಂದರೆ ಪುರಸಭೆ ಜಾಗ ವಾರ್ಡ ನ೦ 18 ರ ಗೌಟಾನ ಜಾಗ ಆಸ್ತಿ ನ೦ 593/ಅ/3 ಈ ಆಸ್ತಿಯನ್ನು ಡಾಕ್ಟರ. ಶ್ರೀಕಾಂತ ತಮ್ಮಣ್ಣ ಕಡಕಬಾವಿ ವೃತ್ತಿಯಿಂದ ಸರ್ಕಾರಿ ವೈದ್ಯ ಪ್ರಸ್ತುತ ಬಾಗಲಕೋಟೆಯ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಟಗೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಭಜಂತ್ರಿ ಓಣಿಯ ಜನರ ನಿದ್ದೆಗೆಡಿಸಿದ್ದು ಸ್ಥಳೀಯರು ಇಂದು ಸ್ಥಳದಲ್ಲಿಯೇ ಪ್ರತಿಭಟನೆಯ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ನಮಗೆ ನಮ್ಮ ರಸ್ತೆ ನೀಡಿ ಎಂದು ಅಲ್ಲಿನ ಮಹಿಳೆಯರ ಸಹ ಆಕ್ರೋಶ ವ್ಯಕ್ತಪಡಿಸಿದರು ಸ್ಥಳೀಯ ನಿಂಗಪ್ಪ ಕಡಕಬಾವಿ ಅವರು ಸರ್ಕಾರದ ಜಾಗವನ್ನು ಸರ್ಕಾರಿ ವೈದ್ಯರಾದ ಶ್ರೀಕಾಂತ ತಮ್ಮಣ್ಣ ಕಟಕಬಾವಿ ಇವರಿಗೆ ಹೇಗೆ ಈ ಜಾಗ ಆಗಿದೆ ಇದಕ್ಕೆಲ್ಲ ಹಿಂದಿನ ಪುರಸಭೆಯ ಅಧಿಕಾರಿಗಳು ಕೂಡಾ ಸಾಥ ನೀಡಿದ್ದು ಇವರೆಲ್ಲರೂ ಸರಕಾರಕ್ಕೆ ಮೊಸ ಮಾಡಿ ಇಲ್ಲಿ ಬಡ ಭಜಂತ್ರಿ ಸಮಾಜದ ಮೇಲೆ ದಬ್ಬಾಳಿಕೆಯ ನಡೆಸುತ್ತಿದ್ದ ಈ ಆಸ್ತಿಯ ಸಲುವಾಗಿ ಸಾಕಷ್ಟು ತಕರಾರಿನ ದಾಖಲೆ ಕೂಡ ನನ್ನ ಬಳಿ ಇವೆ ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಈ ಅಪರಾಧ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಕೂಡಲೇ ಇವರನ್ನೆಲ್ಲ ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು ಯಾವುದೆ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ನಿಂಗಪ್ಪ ಕಡಕಬಾವಿಯವರು ಹೇಳಿದ್ದಾರೆ.
What's Your Reaction?






