ರಾಯಭಾಗ ಪಟ್ಟಣದಲ್ಲಿ ಅಪರಿಚಿತ ಶವ ಪತ್ತೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ರಾಯಬಾಗ್ ಪೊಲೀಸರು
ಬೆಳಗಾವಿ (RNI) ಜಿಲ್ಲೆಯ ರಾಯಬಾಗ ತಾಲೂಕಿನ ರೈಲ್ವೆ ಸ್ಟೇಷನ್ ದಲ್ಲಿ ಸುಮಾರು ಎರಡು-ಮೂರು ವರ್ಷಗಳಿಂದ ಅಪರಿಚಿತ ಅಜ್ಜಿಯೊಬ್ಬರು ತಿರುಗಾಡುತ್ತಿದ್ದರು ಹೊಟ್ಟೆ ಹಸಿದಾಗ ಅಲ್ಲಿ ಇಲ್ಲಿ ಭಿಕ್ಷೆ ಬೇಡಿ ಊಟ ಮಾಡುತ್ತಿದ್ದರು ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಬಳಲುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಅಜ್ಜಿಯನ್ನು ರಾಯಭಾಗ ಪೊಲೀಸರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ದೌಡಾಸಿ ಅಜ್ಜಿಯನ್ನು ರಾಯಭಾಗ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು ಎರಡು ಮೂರು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ 80 ರಿಂದ 85 ವಯಸ್ಸಿನ ಹಿರಿಯ ಜೀವಿ ಆ ಅಜ್ಜಿ ಕೊನೆ ಉಸಿರು ಎಳೆದರು.
ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಸಾಕಷ್ಟು ಜನರನ್ನು ಕರೆದರೂ ಯಾರೂ ಮುಂದು ಬರಲಿಲ್ಲ ಆಗ ಸ್ವತಃ ರಾಯಭಾಗ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಆ ಅಜ್ಜಿಯ ಅಂತ್ಯ ಸಂಸ್ಕಾರವನ್ನು ಹಿಂದೂ ಸಾಂಪ್ರದಾಯದ ಪ್ರಕಾರ ಅಜ್ಜಿ ಅಂತಕ್ರಿಯೆಯನ್ನು ಮಾಡಿ ಮಾನವೀಯತೆ ಮೆರೆದು ಇಲಾಖೆಯಲ್ಲಿ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ರಾಯಭಾಗ ಪೊಲೀಸ್ ಠಾಣೆ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತಿಯಲ್ಲಿ ಅಜ್ಜಿಯ ಅಂತ್ಯಸಂಸ್ಕಾರ ಜರುಗಿತು.
What's Your Reaction?