ಫೈಲನೇಮ-ಭಾರತೀಯ ಯೋಧ ಸಂತೋಷ ಯಳಗೂಡ ನಿಧನ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ
ರಾಯಬಾಗ. (RNI) ರಾಯಬಾಗ ತಾಲೂಕಿನ ಸಿದ್ದಾಪುರ ಗ್ರಾಮದ ಯೋಧ ಸಂತೋಷ ಯಮನಪ್ಪ ಯಳಗೂಡ (30) ದೇಹಲಿಯ ಸಿಗ್ನಲ್ ರೇಜಮೆಂಟ್ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೇವೆಯಲ್ಲಿ ಇರುವಾಗಲೇ ಅನಾರೋಗದಿಂದ ಬಳಲುತ್ತಿದ್ದ ಸಂತೋಷ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ದೇಹಲಿಯ ಸೇನಾ ಆರ್.ಆರ. ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡುತ್ತಿದ್ದರು, ಮಂಗಳವಾರ ಮಧ್ಯಾಹ್ನ 3 ಘಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಯೋಧನ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಯೋಧ ಸಂತೋಷ ಎಂಟು ತಿಂಗಳ ಮಗು, ಪತ್ನಿ, ತಂದೆ ತಾಯಿ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತ ಯೋಧ ಸಂತೋಷ ಪಾರ್ಥಿವ ಶರೀರವನ್ನು ದೆಹಲಿಯಿಂದ ವಿಮಾನ ಮೂಲಕ ಪೂನಾಗೆ ಬಂದು ತಡ ರಾತ್ರಿ ಪೂನಾದಿಂದ ಅಂಬ್ಯುಲೆನ್ಸ್ ಮೂಲಕ ಕುಡಚಿ ಪೊಲೀಸ್ ಠಾಣೆಗೆ ತಲುಪಿ ಕುಡಚಿಯಿಂದ ಯಲ್ಪಾರಟ್ಟಿಗೆ ತಂದು ಬಂಗಲೆ ಹತ್ತಿರ ಯೋಧ ಸಂತೋಷ ಮೃತದೇಹವನ್ನು ಬೆಳಗಾವಿಯಿಂದ ಆಗಮಿಸಿದ ಸೇನಾ ವಾಹನದಲ್ಲಿ ವರ್ಗಾವಣೆ ಮಾಡಿ ಸೇನಾ ವಾಹನವನ್ನು ಹೂಗಳಿಂದ ಅಲಂಕರಿಸಿ ನೂರಾರು ಸೇನಾ ಅಭಿಮಾನಿಗಳೊಂದಿಗೆ ಡಾಲ್ಬಿಯಲ್ಲಿ ದೇಶಭಕ್ತಿ ಗೀತೆಗಳೊಂದಿಗೆ ಖೇಮಲಾಪೂರ ಮಾರ್ಗವಾಗಿ ಸಿದ್ದಾಪುರ ಗ್ರಾಮದ ಪಂಚಾಯತಗೆ ತಲುಪಿತು ಅಲ್ಲಿ ಕೆಲ ಕಾಲ ಕುಟುಂಬಸ್ಥರು ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು.
ಈ ಸಮಯದಲ್ಲಿ ಮೃತ ಯೋಧನ ಪತ್ನಿ, ತಾಯಿ ಕುಟುಂಬಸ್ಥರು ದರ್ಶನ ಪಡೆದರು, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಗೌರವ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಗಣ್ಯರು ಸಾರ್ವಜನಿಕರು ದರ್ಶನ ಪಡೆದರು.
ನಂತರ ಮೃತ ಯೋಧರ ತೋಟದಲ್ಲಿ ಪೊಲೀಸ್ ಹಾಗೂ ಸೇನಾ ಸಿಬ್ಬಂದಿಯಿಂದ ಸಕಲ ಸರ್ಕಾರಿ ಗೌರವ ಅರ್ಪಿಸುವ ಮೂಲಕ ಯೋಧ ಸಂತೋಷ ಯಳಗೂಡ ಅಂತ್ಯಕ್ರಿಯೆ ಮಾಡುವ ಮೂಲಕ ಅಂತಿಮ ವಿದಾಯ ಹೇಳಿದರು.
ಈ ಸಂದರ್ಭದಲ್ಲಿ ಸೇನಾ ಅಧಿಕಾರಿಗಳು, ಮಾಜಿ ಸೈನಿಕರು, ಸಿಪಿಐ ರವಿಚಂದ್ರ ಬಡಫಕೀರಪ್ಪಗೋಳ, ಕುಡಚಿ ತನಿಖಾ ಪಿಇಎಸ್ಐ ಎಸ್.ಬಿ.ಖೋತ, ಎಎಸ್ಐ ಕೆ.ಡಿ.ಸಾಳುಂಕೆ, ಉಪ ತಹಶೀಲ್ದಾರ್ ಎಸ್.ಜಿ. ಡೊಡಮಣಿ, ಬಸವರಾಜ ದಾನೋಳಿ, ಹಿರಿಯರಾದ ದಸ್ತಗೀರ ಕಾಗವಾಡೆ, ಕುಟುಂಬಸ್ಥರು, ಗ್ರಾಮಸ್ಥರು, ಸಹಸ್ರ ಸೇನಾ ಅಭಿಮಾನಿಗಳು ಭಾಗಿಯಾಗಿದ್ದರು.
What's Your Reaction?






