ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸುರೇಶ್ ಮುಂಜೆ
ರಾಯಬಾಗ (RNI) ತಾಲೂಕು ಪಾಲಬಾವಿ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಬರಮಲಿಂಗೇಶ್ವರ ಕಾಲೋನಿ ಹಾಗೂ ಜನತಾ ಪ್ಲಾಟ್ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ಸಿಕ್ಕಿಲ್ಲ ಎಂಬುದರ ಮಾಹಿತಿಯನ್ನು ತಿಳಿದು ಗ್ರಾಮಕ್ಕೆ ಭೇಟಿ ನೀಡಿದ್ದು, ದಿ: 21.10.1975ರಲ್ಲಿ ಸರ್ವೆ ನಂ. 228/1+2ಎ 01ಎಕರೆ 38ಗುಂಟೆ ಜಮೀನು ಬಿಡಿಒ ರಾಯಬಾಗ ಇವರ ಹೆಸರಿಗೆ ಹಾಗೂ 1991ರಲ್ಲಿ ಸರ್ವೇ ನಂಬರ್ 227/2 ರಲ್ಲಿ 01ಎಕರೆ, 09ಗುಂಟೆ ಜಮೀನ್ ಮಂಡಳ ಪಂಚಾಯತ್ ಹಂದಿಗುಂದ ಇವರ ಹೆಸರಿನಲ್ಲಿ ದಾನವಾಗಿ ನೀಡಿದ್ದು ಸದ್ಯ ಈ ಎರಡು ಸರ್ವೆ ನಂಬರ್ ಒಟ್ಟು ಜಮೀನು 03 ಎಕರೆ 07ಗುಂಟೆ ಜಮೀನು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರ ಮೇಲೆ ಇದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ, ನಾವು ಹಾಗೂ EO ಅವರು ಸಮಾಲೋಚನೆ ಮಾಡಿ ನಿಜವಾದ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡುತ್ತೇವೆ. ಒಂದು ವಾರದಲ್ಲಿ ಸರ್ವೆ ಮಾಡಿಸಿ ಹದ್ದು ಬಸ್ತ್ ಮಾಡಲಾಗುವುದು ಎಂದು ತಹಸಿಲ್ದಾರ್ ಸುರೇಶ ಮುಂಜೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಪಾಲಬಾವಿ ಗ್ರಾಮಕ್ಕೆ ದಿ: 19ರಂದು ಮುಂಜಾನೆ 11ಗಂಟೆಗೆ ಗ್ರಾಮಪಂ ಕಾರ್ಯಾಲಯಕ್ಕೆ ಭೇಟಿ ನೀಡಿ, ಕಂದಾಯ ಅಧಿಕಾರಿ, ಗ್ರಾಮಪಂ ಪಿಡಿಒ, ಚುನಾಯಿತ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರೊಂದಿಗೆ ಬರಮಂಗೇಶ್ವರ ಕಾಲೋನಿಯ ಹಾಗೂ ಜನತಾ ಪ್ಲಾಟ್ ಕಾಲೋನಿಯ ಜಮೀನು ಕುರಿತು ಸುದೀರ್ಘ ಚರ್ಚೆ ಮಾಡಿದರು.
"ಪಾಲಬಾವಿ ಗ್ರಾಮದ ಸರ್ವೆ ನಂಬರ್ 228/1+2ಎ 01ಎಕರೆ 38ಗುಂಟೆ ಜಮೀನು, ಸರ್ವೇ ನಂಬರ್ 227/2 ರಲ್ಲಿ 01ಎಕರೆ, 09ಗುಂಟೆ ಜಮೀನ್ ಹಾಗೂ ಸರ್ವೇ ನಂಬರ್ 189/ಬಿ 01ಎಕರೆ ಸ್ಮಶಾನ ಭೂಮಿಗಾಗಿ ಕಾಯ್ದಿರಿಸಿದ ಜಮೀನ್ ಈ ಮೂರು ಕಡೆಯ ಜಮೀನ್ ಸರ್ವೆ ಮಾಡಿಸಿ ಹದ್ದುಬಸ್ತು ಮಾಡಲು ಸರ್ವೇಯರ್ ಅಲ್ಲಮಪ್ರಭು ಬೆಳಕಿಂಡಿ ಅವರಿಗೆ ಸೂಚಿಸಿದ್ದೇನೆ" ಸುರೇಶ ಮುಂಜೆ ತಹಶೀಲ್ದಾರ ರಾಯಬಾಗ.
ಈ ಸಂದರ್ಭದಲ್ಲಿ ಕುಡಚಿ ಕಂದಾಯ ನಿರೀಕ್ಷಕ ಬಸವರಾಜ ಧಾನೋಳಿ, ಗ್ರಾಮ ಆಡಳಿತಾಧಿಕಾರಿ ಎಸ್.ಎಸ್.ಹತ್ತರಿಕಿ, ಪಿಡಿಒ ಶ್ರೀಕಾಂತ ಪಾಟೀಲ, ಗ್ರಾಮ ಸದಸ್ಯ ಪರಪ್ಪ ಗೋಡಿ, ಪ್ರಭು ಕರೋಶಿ, ಶಿರಿಯಾಳ ಮಾದರ, ಗುರುನಾಥ ಜುಂಜರವಾಡ, ಸಾಗರ ಕುರುಬೆಟ್ಟಿ, ಅಸ್ಲಂ ಬಿರಾದಾರ, ಗಿರೇಪ್ಪ ಬಳಗಾರ, ಪ್ರಕಾಶ ಪಾಟೀಲ, ಇಲಾಯಿ ಕಾಗವಾಡ, ಪ್ರಭಾಕರ ಕುರಬೆಟ್ಟಿ, ಶಿವಾಜಿ ಮೇತ್ರಿ, ಸಂಗಪ್ಪ ತುಪ್ಪದ, ಶಿವಪ್ಪ ಕಾಡಶೆಟ್ಟಿ, ಸದಾಶಿವ ಭಂಡಾರಿ, ರಮೇಶ ಉಳ್ಳಾಗಡ್ಡಿ, ಬಹುರಾಜ ತೇಗೂರ, ಸುರೇಶ ಮಠದ, ಮುತ್ತಪ್ಪ ಶಿವಪುರ, ಮಹಾಲಿಂಗ ಜನವಾಡ, ಹೈದರ್ ಮುಜಾವರ, ಬಸಪ್ಪ ನಾಯ್ಕರ, ಶ್ರೀಶೈಲ ಮಾನಶೆಟ್ಟಿ, ಹನುಮಂತ ತಳ್ಳಿ ಇತರರು ಇದ್ದರು.
Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z
What's Your Reaction?