ತಾಲ್ಲೂಕಿನ ವಡ್ರಾಳ ಗೇಟ್ ಬಳಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ನಲ್ಲಿ ತೆರಳುವಾಗ ಜಾರಿ ಬಿದ್ದು ಗಂಭೀರ ಗಾಯಗೊಂಡ ಪಿಯುಸಿ

ತಾಲ್ಲೂಕಿ. (RNI) ತಾಲ್ಲೂಕಿನ ವಡ್ರಾಳ ಗೇಟ್ ಬಳಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ನಲ್ಲಿ ತೆರಳುವಾಗ ಜಾರಿ ಬಿದ್ದು ಗಂಭೀರ ಗಾಯಗೊಂಡ ಪಿಯುಸಿ ವಿದ್ಯಾರ್ಥಿನಿ ಭಾಜಶ್ರೀ ಚಿದಾನಂದ ಶಿರಗನ್ನವರ (೧೮) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ವಡ್ರಾಳ ಗ್ರಾಮದಿಂದ ಚಿಕ್ಕೋಡಿಗೆ ಬಸ್ ಮೂಲಕ ಕಾಲೇಜಿಗೆ ಬೆಳಿಗ್ಗೆ ತೆರಳುವಾಗ ಭಾಜಶ್ರೀ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದಳು. ಚಿಕ್ಕೋಡಿ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪಿಯು ವಿದ್ಯಾರ್ಥಿನಿ ಭಾಜಶ್ರೀ ಸಾವನ್ನಪ್ಪಿದ್ದಾಳೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
What's Your Reaction?






