ತಾಲೂಕಿನಲ್ಲಿ 7641ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ
ರಾಯಬಾಗ (RNI) ತಾಲೂಕಿನ 20ಕೇಂದ್ರಗಳಲ್ಲಿ ಒಟ್ಟು 7641ವಿದ್ಯಾರ್ಥಿಗಳು ಎಸ್.ಎಸ.ಎಲ.ಸಿ ಪರೀಕ್ಷೆ ಬರೆಯಲಿದ್ದು, ಅದರಲ್ಲಿ 3869ವಿದ್ಯಾರ್ಥಿಗಳು, 3690 ವಿದ್ಯಾರ್ಥಿನಿಯರು ಹಾಗೂ 122ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಕುಡಚಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ಜುನ್ನೇದಿಯಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ. ರಾಯಬಾಗ ತಾಲೂಕಿನಲ್ಲಿ 20ಪರೀಕ್ಷಾ ಕೇಂದ್ರಗಳಲ್ಲಿ 20ಜನ ಅಧೀಕ್ಷಕರನ್ನು 6ಜನ ಸಹಾಯಕ ಅಧೀಕ್ಷಕರನ್ನು ನಿಯೋಜಿಸಿದ್ದು, 20ಜನ ಕಸ್ಟೋಡಿಯನ, 415ಜನ ಕೊಠಡಿ ಮೇಲ್ವಿಚಾರಕರು, ಮೋಬೈಲ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಏಳು ಪರೀಕ್ಷಾ ಮಾರ್ಗಗಳ ಮೂಲಕ ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳನ್ನು ಸಾಗಿಸಲಾಗುವುದು. ಪ್ರತಿ ಕೇಂದ್ರದ ಪ್ರತಿ ಕೊಠಡಿಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು ಪ್ರತಿ ಕ್ಯಾಮೆರಾ ವೇಬಕಾಷ್ಟಿಂಗ ನಡೆಯಲಿದೆ.
ದೂರದ ಗ್ರಾಮಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷೆ ನಂತರ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಆಯಾ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಕುಡಚಿ ಪಟ್ಟಣದಲ್ಲಿ ಎರಡು ಪರೀಕ್ಷಾ ಕೇಂದ್ರಗಳಿದ್ದು, ಜುನ್ನೇದಿಯಾ ಪ್ರೌಢಶಾಲೆ ಕೇಂದ್ರದಲ್ಲಿ 16ಕೊಠಡಿಗಳಲ್ಲಿ 395 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಅದರಲ್ಲಿ 5ಅಂಗವಿಕಲ ವಿದ್ಯಾರ್ಥಿಗಳಿದ್ದು, ಒಟ್ಟು 20 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು ಸರ್ಕಾರಿ ಉರ್ದು ಪ್ರೌಢಶಾಲೆ 15ಕೊಠಡಿಗಳಲ್ಲಿ 355 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಕೇಂದ್ರದಲ್ಲಿ 18 ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಪ್ರತಿಯೊಂದು ವೆಬ್ ಕಾಸ್ಟಿಂಗ್ ಆಗಲಿವೆ.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀಕಾಂತ ಕಂಬಾರ, ಹಣಮಂತ ಬೆನಾಡಿ, ಜುನ್ನೇದಿಯಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಐ.ಎನ.ಪಟೇಲ, ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮೇಲ್ಗಡೆ ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.
Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z
What's Your Reaction?