ಕೆಎಸ್ಆರ್ಟಿಸಿ ಕಂಟ್ರೋಲರ್ ನೇಣಿಗೆ ಶರಣು
ಕೆಎಸ್ಆರ್ಟಿಸಿ ಕಂಟ್ರೋಲರ್ ನೇಣಿಗೆ ಶರಣು
ಬೆಳಗಾವಿ :(RNI) ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿವಾನಂದ ಬಾಳಪ್ಪ ಭಜಂತ್ರಿ ವ: 53 ಇವರು ರಾಯಬಾಗದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ತಮ್ಮ ವೈಯಕ್ತಿಕ ಆರೋಗ್ಯ ಸಮಸ್ಯೆಯಿಂದ ಹಾಗೂ ಹೊಟ್ಟೆ ನೋವಿನ ಕಾಯಿಲೆಯಿಂದ ಬಳಲುತ್ತಿದ್ದರು. ಬುಧವಾರ ಬೆಳಗ್ಗೆ ಬಹಳ ಹೊಟ್ಟೆ ನೋವಿನ ತ್ರಾಸ ತಾಳಲಾರದೇ ಮನನೊಂದು ಜೀವನದಲ್ಲಿ ಜಿಗುಪ್ಪೆ ಹೊಂದಿ ಬುಧವಾರ ಮುಂಜಾನೆ 06.00 ಅವಧಿಯಲ್ಲಿ ರಾಯಬಾಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಇರುವ ವಿಶ್ರಾಂತಿ ಕೊಠಡಿಗೆ ಹೋಗುವ ಮೆಟ್ಟಿಲು ಹತ್ತಿರ ಇರುವ ಕಿಟಕಿಯ ಕಟ್ಟಿದ ಸರಳಗೆ ತನ್ನಷ್ಟಕ್ಕೆ ತಾನೇ ನೂಲನ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.
ಅವರ ಆತ್ಮಹತ್ಯೆಗೆ ಅನಾರೋಗ್ಯವೆ ಹೊರತು ಬೇರೆ ಯಾವುದೇ ರೀತಿಯ ಸಂಶಯವಿಲ್ಲ ಎಂದು ಅವರ ಧರ್ಮ ಪತ್ನಿ ಗೀತಾ ಶಿವಾನಂದ ಭಜಂತ್ರಿ ಪೋಲಿಸರಿಗೆ ಹಾಗೂ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ.
ಈ ಬಗ್ಗೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
What's Your Reaction?






