ಕಾಂಗ್ರೆಸ್ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಎಸಿಗೆ ಮನವಿ
ಆ್ಯಂಕರ್(RNI) ಕಾಂಗ್ರೆಸ್ ಸರಕಾರ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ .ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರಖಾನೆ ಮಾಜಿ ಅಧ್ಯಕ್ಷ ಅಮೀತ ಕೋರೆ ಅವರು ನೇತೃತ್ವದಲ್ಲಿ ಗುರುವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ರಾಜ್ಯ ಸರಕಾರ ರೈತರ ಪಂಪಸೆಟಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುವದು ಎಂದು ರಾಜ್ಯ ಸರಕಾರ ಭರವಸೆ ನೀಡಿತ್ತು. ಆದರೆ ಇದೀಗ ಲೋಡ ಶೆಡ್ಡಿಂಗ್ ಹೆಸರಿನಲ್ಲಿ ವಿದ್ಯುತ್ ಕಡಿತಗೊಳಿಸುವ ಮೂಲಕ ಅನ್ನದಾತನ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮಗೂ ಪ್ರೀ ನಮಗೂ ಪ್ರೀ ಅಂತಾ ವಿದ್ಯುತ್ ನೀಡಲಾಗುವದು ಎಂದು ರಾಜ್ಯ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದೆ.ಆದರೆ ದೇಶಕ್ಕೆ ಅನ್ನ ನೀಡುವ ರೈತರ ಪಂಪಸೆಟಗಳಿಗೆ ನಿಗದಿತ ಸಮಯದಲ್ಲಿ ವಿದ್ಯುತ್ ನೀಡಲಾಗುತ್ತಿಲ್ಲ.ಇದರಿಂದಾಗಿ ಸಾಲ ಸೂಲ ಮಾಡಿ ಬೆಳೆ ಮಾಡಿದ ಬೆಳೆಯು ಸಮರ್ಪಕ ವಿದ್ಯುತ್ ಇಲ್ಲದೆ ಬೆಳೆಗಳು ಒಣಗಲು ಪ್ರಾರಂಭಿಸಿವೆ.ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದರಿಂದ ಬೆಳಗಾವಿ ಜಿಲ್ಲೆಯಲ್ಲಿನ ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡುವಂತೆ ಒತ್ತಾಯಿಸಿದರು.ಲೋಡ ಶೆಡ್ಡಿಂಗ್ ಸಮಸ್ಯೆ ಒಂದು ವಾರದಲ್ಲಿ ಮುಗಿಯದಿದ್ದರೆ ಉಗ್ರವಾದ ಹೋರಾಟ ಮಾಡುವದಾಗಿ ಅವರು ಎಚ್ಚರಿಸಿದರು.
ಬೈಟ್:ಮಹಾಂತೇಶ ಕವಟಗಿಮಠ, ಮಾಜಿ ವಿಧಾನಪರಿಷತ ಸದಸ್ಯ
ಈ ಸಂದರ್ಭದಲ್ಲಿ ಚಿದಾನಂದ ಸಕ್ಕರೆ ಕಾರ್ಖಾನೆಯ ಅಧ್ಯಕ್ಷಬ ಮಲ್ಲಿಕಾರ್ಜುನ ಕೋರೆ,ಉಪಾಧ್ಯಕ್ಷ ಭರತ ಬನವಣೆ,ಕಾರಖಾನೆ ನಿರ್ದೇಶಕರಾದ ಸಂದೀಪ ಪಾಟೀಲ,ದಾದು ಕಾಟೆ,ಅಜೀತರಾವ ದೇಸಾಯಿ,ಬಾಳಾಸಾಬಾ ರೇಂದಾಳೆ,ಸತೀಶ ಅಪ್ಪಾಜಿಗೋಳ,ರಮೇಶ ಕಾಳನ್ನವರ,ಉಪಸ್ಥಿತರಿದ್ದರು.
What's Your Reaction?